ಎಸ್.ಎಸ್.ಕೆ. ಸಮಾಜ, ರೋಟರಿ ದಕ್ಷಿಣದಿಂದ ಪರಿಸರ ದಿನಾಚರಣೆ

ಎಸ್.ಎಸ್.ಕೆ. ಸಮಾಜ, ರೋಟರಿ ದಕ್ಷಿಣದಿಂದ ಪರಿಸರ ದಿನಾಚರಣೆ

ದಾವಣಗೆರೆ, ಜೂ. 12 – ವಿಶ್ವ ಪರಿಸರ ದಿನಾ ಚರಣೆಯ ಅಂಗವಾಗಿ ಎಸ್.ಎಸ್.ಕೆ. ಸಮಾಜ ಹಾಗೂ ರೋಟರಿ ಕ್ಲಬ್ ದಾವಣಗೆರೆ ದಕ್ಷಿಣದ ಸಹಭಾಗಿತ್ವದಲ್ಲಿ ಸ್ಥಳೀಯ ಶಂಕರ ವಿಹಾರ ಬಡಾವಣೆಯಲ್ಲಿರುವ ಶ್ರೀ ಅಂಬಾಭವಾನಿ ದೇವಿ ದೇವಸ್ಥಾನದ ಆವರಣದಲ್ಲಿ ಇಂದು ಏರ್ಪಾಡಾಗಿದ್ದ ಸಸಿ ನೆಡುವ ಕಾರ್ಯಕ್ರಮಕ್ಕೆ ಜಿಲ್ಲಾಧಿಕಾರಿ ಡಾ. ವೆಂಕಟೇಶ್ ಎಂ.ವಿ. ಚಾಲನೆ ನೀಡಿದರು.  ಈ ಸಂದ ರ್ಭದಲ್ಲಿ ಮಾತನಾಡಿದ ಜಿಲ್ಲಾಧಿಕಾರಿಗಳು, ಸಾರ್ವಜನಿ ಕರು ಪರಿಸರ ಸಂರಕ್ಷಣೆ ಹಾಗೂ ಸಸಿಗಳನ್ನು ಹೆಚ್ಚಿನ ಸಂಖ್ಯೆಯಲ್ಲಿ ನೆಡಲು ಹಾಗೂ ಪೋಷಿಸಲು ಕರೆ ನೀಡಿದರು. 

ರೋಟರಿ ಕ್ಲಬ್ ದಾವಣಗೆರೆ ದಕ್ಷಿಣದ ಅಧ್ಯಕ್ಷ ಪುಟ್ಟೇಶ ಎಂ.ಆರ್., ಮಹಾನಗರ ಪಾಲಿಕೆ ಸದಸ್ಯರಾದ ಶ್ರೀಮತಿ ಆಶಾ ಉಮೇಶ್, ಎಸ್.ಎಸ್.ಕೆ. ಸಮಾಜದ ಅಧ್ಯಕ್ಷ ಮಲ್ಲಾರಸಾ ಆರ್. ಕಾಟ್ವೆ, ಮಹಿಳಾ ಮಂಡಳಿಯ ಅಧ್ಯಕ್ಷರಾದ ಶ್ರೀಮತಿ ಗಾಯತ್ರಿ ಬಾಯಿ, ಎಂ ಹಬೀಬ್ ಸೇರಿದಂತೆ ಇತರರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.

error: Content is protected !!