ರೇಣುಕಾ ಸ್ವಾಮಿ ಹತ್ಯೆ : ಅಭಾವಿಮ ಜಿಲ್ಲಾ ಯುವ ಘಟಕದಿಂದ ಕ್ರಮಕ್ಕೆ ಆಗ್ರಹ

ರೇಣುಕಾ ಸ್ವಾಮಿ ಹತ್ಯೆ : ಅಭಾವಿಮ  ಜಿಲ್ಲಾ ಯುವ ಘಟಕದಿಂದ ಕ್ರಮಕ್ಕೆ ಆಗ್ರಹ

ದಾವಣಗೆರೆ, ಜೂ. 12 – ಸಾಮಾಜಿಕ ಜಾಲತಾಣದಲ್ಲಿ ಕಾಮೆಂಟ್ ಮಾಡಿದ್ದನೆಂದು ಚಿತ್ರದುರ್ಗದ ರೇಣುಕಾಸ್ವಾಮಿ ಎಂಬಾತನನ್ನು  ಅಪಹರಿಸಿ, ಕೊಲೆ ಮಾಡಿ, ರಸ್ತೆ ಬದಿಯಲ್ಲಿ ಬಿಸಾಕಿ ಹೋಗಿರುವ ಚಿತ್ರ ನಟ ದರ್ಶನ್ ಅಭಿಮಾನಿಗಳು ಹಾಗೂ ಈ ಕೃತ್ಯದಲ್ಲಿ ಭಾಗಿಯಾಗಿರುವವರು ಅದೆಷ್ಟೇ ಶಕ್ತಿಶಾಲಿಗಳಾಗಿದ್ದರೂ ಕಾನೂನು ರೀತಿ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾದ ಜಿಲ್ಲಾ ಯುವ ಘಟಕ ಸರ್ಕಾರ ವನ್ನು ಒತ್ತಾಯಿಸಿದೆ.

ಅಲ್ಲದೇ, ಮೃತರ ಕುಟುಂಬಕ್ಕೆ ಸೂಕ್ತ ಪರಿಹಾರ ಒದಗಿಸಬೇಕೆಂದು ಜಿಲ್ಲಾಧಿಕಾರಿ ವೆಂಕಟೇಶ್‌ ಅವರನ್ನು ಇಂದು ಅವರ ಕಚೇರಿಯಲ್ಲಿ ಭೇಟಿ ಮಾಡಿ, ಅವರ ಮೂಲಕ ಸರ್ಕಾರಕ್ಕೆ ಸಲ್ಲಿಸಿರುವ ಮನವಿ  ಪತ್ರದಲ್ಲಿ ಕೇಳಿಕೊಳ್ಳಲಾಗಿದೆ. 

ಈ ಸಂದರ್ಭದಲ್ಲಿ  ವೀರಶೈವ ಲಿಂಗಾಯತ ಮಹಾಸಭಾ ಜಿಲ್ಲಾ ಯುವ ಘಟಕ, ಕಾರ್ಯದರ್ಶಿ ಶಿವರತನ್, ಶಿವರಾಜ್ ಜೆ., ಅಜಿತ್ ಆಲೂರ್, ಸಂತೋಷ್ ಅಣಬೇರು, ಅನಿಲ್ ಬಸವರಾಜ್ ಮತ್ತಿತರರು ಹಾಜರಿದ್ದರು.

error: Content is protected !!