ರಾಣೇಬೆನ್ನೂರು, ಜೂ.11- ಜಿಲ್ಲೆಯ ಖಾಸಗಿ ಶಾಲಾ-ಕಾಲೇಜುಗಳಲ್ಲಿ ಡೊನೇಷನ್ ಹಾವಳಿ ಹೆಚ್ಚಾ ಗಿದ್ದು, ಹದ್ದುಮೀರಿದ ಶಿಕ್ಷಣ ಸಂಸ್ಥೆಗಳ ಮಾನ್ಯತೆ ರದ್ದುಪಡಿಸಬೇಕೆಂದು ಕರ್ನಾಟಕ ವಿದ್ಯಾರ್ಥಿ ವಿಕಾಸ ಪರಿಷತ್ತಿನ ಅಧ್ಯಕ್ಷ, ರೈತ ಮುಖಂಡ ರವೀಂದ್ರಗೌಡ ಎಫ್. ಪಾಟೀಲ ಮತ್ತು ಕಾರ್ಯದರ್ಶಿ ಜಗದೀಶ ಕೆರೂಡಿ ಆಗ್ರಹಿಸಿದ್ದಾರೆ.
ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಶಿಕ್ಷಣ ವ್ಯಾಪಾರೀಕರಣಕ್ಕೆ ಕಡಿವಾಣ ಹಾಕುವ ದೃಷ್ಟಿಯಿಂದ ಸರ್ಕಾರ ಹಲವು ಕಾಯ್ದೆ ಗಳನ್ನು ಜಾರಿಗೆ ತಂದಿದೆ. ಇದರ ಪ್ರಕಾರ ಅನು ದಾನಿತ ಮತ್ತು ಅನುದಾನ ರಹಿತ ಸಂಸ್ಥೆಗಳು ಅಭಿ ವೃದ್ಧಿ ಶುಲ್ಕವನ್ನು ಸರ್ಕಾರ ನಿಗದಿ ಪಡಿಸಿರುವಂತೆ ಸಂಗ್ರಹಿಸಲು ಮಾತ್ರ ಅವಕಾಶವಿದೆ, ಅದನ್ನು ಮೀರಿ ಸಂಗ್ರಹಿಸುವುದು ಕಾನೂನು ಪ್ರಕಾರ ಅಪರಾಧವಾಗಿದೆ.
ಕಡಿಮೆ ಶುಲ್ಕ ಪಡೆದು ಉತ್ತಮ ಶಿಕ್ಷಣ ನೀಡ ಬೇಕಾದ ವಿದ್ಯಾಸಂಸ್ಥೆಗಳು ಸರ್ಕಾರದ ನಿಯಮಗಳನ್ನು ಗಾಳಿಗೆ ತೂರಿ ಮನಬಂದಂತೆ ಹಣ ವಸೂಲಿ ಮಾಡುತ್ತಿವೆ. ಡೊನೇಷನ್ ಹೆಸರಿನಲ್ಲಿ ಹಗಲು ದರೋಡೆ ನಡೆಸುತ್ತಿದ್ದರೂ ಸಂಬಂಧಪಟ್ಟ ಇಲಾಖೆಯ ಹಿರಿಯ ಅಧಿಕಾರಿಗಳು ಇಂತಹ ಶಿಕ್ಷಣ ಸಂಸ್ಥೆಗಳ ಮೇಲೆ ಯಾವುದೇ ಕ್ರಮ ಜರುಗಿಸದೇ ಇರುವುದನ್ನು ನೋಡಿದರೆ ಖಾಸಗಿ ಶಿಕ್ಷಣ ಸಂಸ್ಥೆಯವರೊಂದಿಗೆ ಅಧಿಕಾರಿಗಳ ‘ಮ್ಯಾಚ್ ಫಿಕ್ಸಿಂಗ್’ ಮಾಡಿಕೊಂಡಿದ್ದಾರೆ ಎಂಬುದು ಸಾಬೀತಾಗುತ್ತದೆ ಎಂದಿದ್ದಾರೆ.
ಜಿಲ್ಲಾ ಮಟ್ಟದಲ್ಲಿ ಜಿಲ್ಲಾ ಶಿಕ್ಷಣ ರೆಗ್ಯುಲೇಟಿಂಗ್ ಸಮಿತಿ ರಚಿಸಬೇಕು. ಶಾಲಾ-ಕಾಲೇಜುಗಳ ಮಕ್ಕಳ ಸಂಖ್ಯೆಯ ಪ್ರಕಾರ ಆದಾಯ ಕ್ರೋಢೀಕರಿಸಿ ಇಲಾ ಖೆಯೇ ಶುಲ್ಕ ನಿಗದಿ ಮಾಡಬೇಕು. ಡೊನೇಷನ್ ವಿರುದ್ಧ ಸರ್ಕಾರ ಕೈಗೊಂಡಿರುವ ಕ್ರಮಗಳ ಬಗ್ಗೆ ಅರಿವು ಮೂಡಿಸಲು ಉಚಿತ ಹೆಲ್ಪ್ಲೈನ್ ಆರಂಭಿಸ ಬೇಕೆಂದು ಪಾಟೀಲರು ಒತ್ತಾಯಿಸಿದ್ದಾರೆ.
ವಾರದೊಳಗಾಗಿ ಇಲಾಖೆ ಈ ಬಗ್ಗೆ ಕ್ರಮ ಜರುಗಿಸದಿದ್ದರೆ ಇದೇ 14 ರಂದು ಎಲ್ಲಾ ಸಂಘಟನೆಗಳಿಂದ ಜಿಲ್ಲಾಡಳಿತದವರೆಗೆ ಪಾದಯಾತ್ರೆ ಆರಂಭಿಸಲಾಗುವುದು ಎಂದು ಸರ್ಕಾರ ಮತ್ತು ಇಲಾಖೆಗೆ ಎಚ್ಚರಿಕೆ ನೀಡಿದರು.
ಈ ಸಂದರ್ಭದಲ್ಲಿ ಪರಿಷತ್ ಕಾರ್ಯದರ್ಶಿ ಜಗದೀಶ್ ಕೆರೂಡಿ, ರಾಜ್ಯ ಕಾರ್ಯಕಾರಿ ಸಮಿ ತಿಯ ಬಸವರಾಜ ಭೋವಿ, ಸಿರ್ಸಿ ರಾಘವೇಂದ್ರ ನಾಯಕ, ರೂಪಾ ಪಾಟೀಲ ಇದ್ದರು.