ಜಗಳೂರು, ಜೂ. 3 – ತಾಲ್ಲೂಕಿನ ಬಿದರಕೆರೆ ಗ್ರಾಮದ ಜಮೀನಿನಲ್ಲಿ ಪರಿಹಾರಕ್ಕೆ ಆಗ್ರಹಿಸಿ ಹರಿಯಾಣ ಮೂಲದ ಖಾಸಗಿ ರಿನಿವ್ಯೋ ವಿಂಡ್ ಫ್ಯಾನ್ ಕಂಪನಿ ವಿರುದ್ದ ಫ್ಯಾನ್ ವಿದ್ಯುತ್ ಲೈನ್ ಸಂಪರ್ಕ ಸ್ಥಗಿತಗೊಳಿಸಿ ಕರ್ನಾಟಕ ರೈತ ಸೇನೆಯ ಪದಾಧಿಕಾರಿಗಳು ಪ್ರತಿಭಟನೆ ನಡೆಸಿದರು.
ಕರ್ನಾಟಕ ರಾಜ್ಯ ರೈತ ಸಂಘದ ರಾಜ್ಯಾಧ್ಯಕ್ಷ ಹಾಗೂ ಜಮೀನಿನ ಮಾಲೀಕ ಉಜ್ಜನಗೌಡ್ರು ಮಾತನಾಡಿ, ನಮ್ಮ ಸ್ವಂತಕ್ಕೆ ಸೇರಿದ ಸರ್ವೆ ನಂಬರ್ 60/4 ಜಮೀನಿನಲ್ಲಿ ರಿನಿವ್ಯೂ ವಿಂಡ್ ಫ್ಯಾನ್ ಕಂಪನಿ ಕಳೆದ ಮೂರು ವರ್ಷಗಳ ಹಿಂದೆ ನಮ್ಮ ಜಮೀನಿನಲ್ಲಿ ದೌರ್ಜನ್ಯದಿಂದ ವಿಂಡ್ ಫ್ಯಾನ್ ನ ಹೈಟೆನ್ಷನ್ ವಿದ್ಯುತ್ ಸಂಪರ್ಕದ ಲೈನ್ ಎಳೆದಿದ್ದು. ನಮ್ಮ ಜಮೀನಿನಲ್ಲಿ ಎಳೆಯದಂತೆ ತಡೆಯೊಡ್ಡಿದ ಸಂದರ್ಭದಲ್ಲಿ ಮಾರುಕಟ್ಟೆ ಬೆಲೆಯನ್ವಯ 60 ಲಕ್ಷ ಪರಿಹಾರ ಭರಿಸಲು ಭರವಸೆ ನೀಡಿದ್ದರು. ಇದುವರೆಗೂ ಯಾವುದೇ ಹಣ ನೀಡದೇ ವಂಚಿಸಿ ಪರಿಹಾರ ನೀಡಿದ್ದೇವೆ ಎಂಬ ಸುಳ್ಳು ಆರೋಪ ಮಾಡುತ್ತಿದ್ದಾರೆ. ಪಕ್ಕದ ಜಮೀನಿನ ರೈತರಿಗೆ ನಮ್ಮ ಜಮೀನಿನ್ನು ಕೃಷಿಯೇತರ ಚಟುವಟಿಕೆಗೆ (ಎನ್ ಎ) ಅನುಮತಿಗೆ ಅರ್ಜಿ ಸಲ್ಲಿಸಿದ್ದು. ಸೌತೆ ಕಂಪನಿ ತೆರೆದು ಸುತ್ತಮುತ್ತ ನಿರುದ್ಯೋಗಿಗಳಿಗೆ ಉದ್ಯೋಗ ಕಲ್ಪಿಸಲು ಉದ್ದೇಶ ಹೊಂದಲಾಗಿದೆ. ಫ್ಯಾನ್ ನ ವಿದ್ಯುತ್ ಸಂಪರ್ಕದ ಲೈನ್ ಅಡ್ಡಿಯಾಗಿದೆ. ಶೀಘ್ರ ಬೇಡಿಕೆ ಈಡೇರಿಸದಿದ್ದರೆ ಲೈನ್ ಕಿತ್ತು ಹಾಕಲಾಗುವುದು ಎಂದು ಎಚ್ಚರಿಸಿದರು.
ಈ ಸಂದರ್ಭದಲ್ಲಿ ಸಂಘಟನೆಯ ಪದಾಧಿಕಾರಿಗಳಾದ ಮೆಳ್ಳೇಕಟ್ಟೆ ಪದ್ಮ, ನೆಲಹೊನ್ನಿ ರಮೇಶ್, ಅನಿತಮ್ಮ, ಭಾಗ್ಯಮ್ಮ, ಮಂಜುನಾಥ್, ಗೀತಮ್ಮ, ಚೌಡಮ್ಮ, ಮುಖಂಡರಾದ ಬಸವರಾಜ್, ಚಂದ್ರಣ್ಣ ಭಾಗವಹಿಸಿದ್ದರು.