ದಾವಣಗೆರೆ, ಜೂ.3- ಜಾನಪದ ವಿದ್ವಾಂಸ ಡಾ. ಎಂ.ಜಿ. ಈಶ್ವರಪ್ಪ ಅವರ ನಿಧನಕ್ಕೆ ಸಾಹಿತಿ ಆರ್. ಶಿವಕುಮಾರ ಸ್ವಾಮಿ ಕುರ್ಕಿ ಕಂಬನಿ ಮಿಡಿದಿದ್ದಾರೆ.
ಧ.ರ.ಮಾ. ಕಾಲೇಜಲ್ಲಿ ನನ್ನ ವಿದ್ಯಾಗುರುಗಳಾಗಿದ್ದ ಈಶ್ವರಪ್ಪ ಅವರು ಪ್ರತಿಮಾಸಭಾದ ಮೂಲಕ ನನ್ನನ್ನು ರಂಗಭೂಮಿಯಲ್ಲಿ ನೆಲೆಯೂರಿಸಿ ಬೆಳೆಸಿದಂತವರು ಎಂದು ಕುರ್ಕಿ ಕೃತಜ್ಞತೆ ಸಲ್ಲಿಸಿದ್ದಾರೆ.
ಈಶ್ವರಪ್ಪ ಅವರ ಕನ್ನಡ ಓದುವ ಬರೆಯುವ ಮಾತನಾಡುವ ಗಾಂಭೀರ್ಯ ಮಧುರಕಂಠದ ಶೈಲಿಯೇ ನನ್ನನ್ನು ಕನ್ನಡ ಮೇಷ್ಟ್ರು ಆಗುವಂತೆ ಮಾಡಿತ್ತು. ಅವರಿಲ್ಲದ ದೇವನಗರಿಯ ಸಾಂಸ್ಕೃತಿಕ ವಲಯ ಬರಡಾಗಲಿದೆ ಎನಿಸುತ್ತಿದೆ. ಪ್ರತಿಮಾಸಭಾದ ಮೂಲಕ ದಾವಣಗೆರೆಯ ಸಾಂಸ್ಕೃತಿಕ ರಾಯಭಾರಿಗಳಾಗಿದ್ದ ಮೇಷ್ಟ್ರು ಅಪ್ರತಿಮರಾದರು ಎಂದು ಶಿವಕುಮಾರಸ್ವಾಮಿ ಕುರ್ಕಿ ಬಣ್ಣಿಸಿದ್ದಾರೆ.