ಡಾ. ಎಂ.ಜಿ. ಈಶ್ವರಪ್ಪ ನಿಧನಕ್ಕೆ ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್ ಸಂತಾಪ

ಹರಪನಹಳ್ಳಿ, ಜೂ. 2 – ಜಾನಪದ ವಿದ್ವಾಂಸ ಡಾ. ಎಂ.ಜಿ. ಈಶ್ವರಪ್ಪ ಅವರ ನಿಧನಕ್ಕೆ ಹರಪನಹಳ್ಳಿ ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಕೆ.ಉಚ್ಚೆಂಗೆಪ್ಪ, ನಿವೃತ್ತ ಪ್ರಾಂಶುಪಾಲ ಜಿ. ಬಸವಂತಪ್ಪ, ಉಪನ್ಯಾಸಕ ಎಚ್. ಮಲ್ಲಿಕಾರ್ಜುನ,   ಹರಪನಹಳ್ಳಿ ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್ ಮಾಜಿ ಅಧ್ಯಕ್ಷರುಗಳಾದ ಡಿ. ರಾಮನಮಲಿ, ಸಿದ್ದಪ್ಪ,  ಸಾಹಿತಿ ಇಸ್ಮಾಯಿಲ್ ಎಲಿಗಾರ್, ವಿಜಯನಗರ ಜಿಲ್ಲಾ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಬಸವರಾಜ ಸಂಗಪ್ಪನವರ್, ಸಾಹಿತ್ಯ ಪರಿಷತ್ತಿನ ಹೇಮಣ್ಣ ಮೋರಗೆರೆ, ರಾಘವೇಂದ್ರ ಶೆಟ್ಟಿ, ಪದ್ಮರಾಜ ಜೈನ್, ಜಿ. ಮಹಾದೇವಪ್ಪ, ಸೇರಿದಂತೆ ಇತರರು ಸಂತಾಪ ವ್ಯಕ್ತ ಪಡಿಸಿದ್ದಾರೆ.

ಅಜಾತ ಶತ್ರು, ಸಾಹಿತ್ಯ ವಲಯದಲ್ಲಿ ತಮ್ಮನ್ನು ತಾವು ತೋಡಗಿಸಿಕೊಂಡು  ನಾಡಿನ ಶಿಕ್ಷಣ, ಸಾಹಿತ್ಯ ಹಾಗೂ ಸಾಂಸ್ಕೃತಿಕ ಲೋಕದ ಹಿರಿಯ ಚೇತನ, ಜಾನಪದ  ವಿದ್ವಾಂಸ ಡಾ. ಎಂ.ಜಿ. ಈಶ್ವರಪ್ಪ ಇನ್ನಿಲ್ಲವಾಗಿರುವುದು ಸಾಹಿತ್ಯ ಕ್ಷೇತ್ರಕ್ಕೆ ಶೂನ್ಯ ಭಾವ ಆವರಿಸಿದಂತಾಗಿದೆ.

ಯಾರೊಂದಿಗೂ ದ್ವೇಷ ಅಸೂಯೆಯ ಮಾತುಗಳನ್ನಾಡದೇ ಸಾತ್ವಿಕ ಸಮೃದ್ಧ ಸಮಾಜ ನಿರ್ಮಾಣಗೊಳ್ಳಬೇಕೆಂಬ ಅವರ ಸದಾಶಯದ ನುಡಿಗಳು ಶ್ರೋತೃಗಳ ಮನದಲ್ಲಿ ಹೊಸಬೆಳಕನ್ನು ಮೂಡಿಸುತ್ತಿದ್ದವು. ಅವರ ಅಗಲಿಕೆ ನೋವನ್ನುಂಟು ಮಾಡಿದೆ. 

error: Content is protected !!