ಐಟಿಐ : ಆನ್‌ಲೈನ್ ಪ್ರವೇಶ ಮುಂದೂಡಿಕೆ

ದಾವಣಗೆರೆ, ಜೂ. 2- ಸರ್ಕಾರಿ ಕೈಗಾರಿಕಾ ತರಬೇತಿ ಸಂಸ್ಥೆ ದಾವಣಗೆರೆಯಲ್ಲಿ ಆಗಸ್ಟ್-2024 ನೇ ಸಾಲಿನ ಆನ್‌ಲೈನ್ ಪ್ರವೇಶದ ದಿನಾಂಕವನ್ನು ಇದೇ ದಿನಾಂಕ 9 ರವರೆಗೆ ಮುಂದೂಡಿ ಆದೇಶ ಹೊರಡಿಸಲಾಗಿದೆ. ಪ್ರವೇಶ ಬಯಸುವ ಅರ್ಹ ಅಭ್ಯರ್ಥಿಗಳು ಆನ್‌ಲೈನ್ ಮೂಲಕ ಇಲಾಖಾ ವೆಬ್‌ಸೈಟ್ www.cite.karnataka.gove.in ನಲ್ಲಿ ಯಾವುದೇ ಸರ್ಕಾರಿ ಕೈಗಾರಿಕಾ ತರಬೇತಿ ಸಂಸ್ಥೆ, ಇಂಟರ್‌ನೆಟ್, ಸೈಬರ್ ಕೆಫೆ ಗಳಲ್ಲಿ ರಾಜ್ಯದ ಯಾವುದೇ ಭಾಗದಿಂದ ಇದೇ ದಿನಾಂಕ 9 ರವರೆಗೆ ಆನ್‌ಲೈನ್ ಮುಖಾಂತರ ಅರ್ಜಿ ಸಲ್ಲಿಸಲು ತಿಳಿಸಲಾಗಿದೆ. 

error: Content is protected !!