ಪೋಲಾಗುತ್ತಿರುವ ನೀರು : ಅಧಿಕಾರಿಗಳು ನಿರ್ಲಕ್ಷ್ಯ

ಪೋಲಾಗುತ್ತಿರುವ ನೀರು : ಅಧಿಕಾರಿಗಳು ನಿರ್ಲಕ್ಷ್ಯ

ದಾವಣಗೆರೆ, ಜೂ. 2 – ಮಹಾನಗರದಲ್ಲಿ ನೀರಿನ ಬವಣೆಯನ್ನು ಕಾಣುತ್ತಿದ್ದೇವೆ. ಶುದ್ಧ ಸಿಹಿ ನೀರಿಗಾಗಿ ಪರದಾಡುವ ಪರಿಸ್ಥಿತಿಯನ್ನು ಕಂಡಿದ್ದೇವೆ.

ಹೀಗಿದ್ದ ಪರಿಸ್ಥಿತಿಯಲ್ಲಿ ನಗರದ ಆರ್.ಟಿ.ಒ. ಕಚೇರಿಯಿಂದ ಎಸ್.ಪಿ. ಕಚೇರಿಯ ಮೂಲಕ ಹಾದು ಶಿವಾಲಿ ಟಾಕೀಸ್ ಕಡೆ ಹೋಗುವಾಗ ಮೇಲ್‌ ಸೇತುವೆ ರಸ್ತೆಯ ಪಕ್ಕದಲ್ಲಿ ಇರುವ ರಸ್ತೆಯಲ್ಲಿ ನೀರಿನ ಜಂಕ್ಷನ್‌ನಲ್ಲಿ ಪ್ರತಿದಿನ ನೀರು ಪೋಲಾಗುತ್ತಿರುತ್ತದೆ. ಕಡಿಮೆ ಎಂದರೂ ನಿಮಿಷಕ್ಕೆ ಎರಡು ಲೀ. ನೀರು ಪೋಲಾಗುವುದನ್ನು ಕಾಣಬಹುದಾಗಿದೆ.

ಈ ಪೋಲಾಗುವ ನೀರನ್ನು ತಡೆಹಿಡಿಯುವಲ್ಲಿ ಅಧಿಕಾರಿಗಳು ನಿರ್ಲಕ್ಷ್ಯ ವಹಿಸಿದ್ದಾರೆ. ಇದರ ಜವಾಬ್ದಾರಿ ವಹಿಸಿಕೊಂಡಿರುವ ಸಿಬ್ಬಂದಿಯೂ ನೀರಿನ ಮೇಲೆ ಕಾಳಜಿ  ವಹಿಸಿದಂತೆ ಕಾಣುತ್ತಿಲ್ಲ. ಈ ಕೂಡಲೇ ಚೆಲ್ಲಿ ಹೋಗುತ್ತಿರುವ ನೀರನ್ನು ಪೋಲಾಗದಂತೆ ತಡೆಹಿಡಿಯಬೇಕು ಎಂದು ನಗರದ ಸಾರ್ವಜನಿಕರ ಪರವಾಗಿ ಸಂಬಂಧಪಟ್ಟ ಅಧಿಕಾರಿಗಳಲ್ಲಿ ವಿನಂತಿ. 

error: Content is protected !!