ಸಿಇಟಿಯಲ್ಲಿ ಸಿದ್ಧಗಂಗಾ ವಿದ್ಯಾ ಸಂಸ್ಥೆ ವಿದ್ಯಾರ್ಥಿಗಳ ಅಮೋಘ ಸಾಧನೆ

ಸಿಇಟಿಯಲ್ಲಿ ಸಿದ್ಧಗಂಗಾ ವಿದ್ಯಾ ಸಂಸ್ಥೆ ವಿದ್ಯಾರ್ಥಿಗಳ ಅಮೋಘ ಸಾಧನೆ

ದಾವಣಗೆರೆ, ಜೂ. 2 – 2024-25ನೇ ಸಾಲಿನ ಕೆಸಿಇಟಿ ಫಲಿತಾಂಶ ಪ್ರಕಟಿಸಿದ್ದು, ನಗರದ ಸಿದ್ಧಗಂಗಾ ಪದವಿ ಪೂರ್ವ ವಿಜ್ಞಾನ ಕಾಲೇ ಜಿನ ವಿದ್ಯಾರ್ಥಿಗಳು ಅತ್ಯುತ್ತಮ ಫಲಿತಾಂಶ ನೀಡಿ ಅಮೋಘ ಸಾಧನೆ ಗೈದಿದ್ದಾರೆ.

ಸಚಿನ್ ರಮೇಶ್ ಮಳಗಿ ಕೃಷಿ ವಿಜ್ಞಾನ ವಿಭಾಗದಲ್ಲಿ 16ನೇ ರಾಂಕ್ ಪಡೆದರೆ, ಸಂಜನಾ ರಾಮಪ್ಪ ಬಕ್ರಿ , ಎನ್.ಎಂ. ಸಾಗರ್, ತರನುಂ ಸುಲ್ತಾನ ಕ್ರಮವಾಗಿ 295, 502, 949ನೇ ರಾಂಕ್  ಪಡೆದಿದ್ದಾರೆ.

ಪಶು ವೈದ್ಯಕೀಯ ವಿಭಾಗದಲ್ಲಿ ಜೆ.ಆರ್. ಸಂಜಯ್ 134ನೇ ರಾಂಕ್ ಪಿ. ಹೇಮಂತ್ 379ನೇ ರಾಂಕ್, ಟಿ.ಆರ್. ಹೇಮಂತ್ 539ನೇ ರಾಂಕ್ ಶ್ರೀಕಾಂತ್ ಹಾವೇರಿ 880 ನೇ ರಾಂಕ್ ಪಡೆದಿದ್ದಾರೆ. 

ಪಶು ವೈದ್ಯಕೀಯ ಕೃಷಿ ವಿಜ್ಞಾನ, ತೋಟಗಾರಿಕೆ ಹಾಗೂ ಇಂಜಿನಿಯರಿಂಗ್ ವಿಭಾಗಗಳಿಗೆ ಕಾಲೇಜಿನಿಂದ 48 ವಿದ್ಯಾರ್ಥಿಗಳು 3000 ದೊಳಗೆ ರಾಂಕ್ ಪಡೆದು ಆಯ್ಕೆಯಾಗಿದ್ದಾರಲ್ಲದೇ, 5000 ಒಳಗಿನ ರಾಂಕ್ ನವರು ಒಟ್ಟು 63 ಜನ ವಿದ್ಯಾರ್ಥಿಗಳು ಇರುತ್ತಾರೆ. ಹತ್ತು ಸಾವಿರದ ಒಳಗೆ ಒಟ್ಟು 109 ವಿದ್ಯಾರ್ಥಿಗಳು ರಾಂಕ್ ಪಡೆದಿದ್ದಾರೆ.

ಈ ಎಲ್ಲಾ ವಿದ್ಯಾರ್ಥಿಗಳನ್ನು ಸಂಸ್ಥೆಯ ಮುಖ್ಯಸ್ಥರಾದ ಡಾ. ಜಸ್ಟಿನ್ ಡಿಸೌಜಾ ಅಭಿನಂದಿಸಿದ್ದಾರೆ. ವಿದ್ಯಾರ್ಥಿಗಳಿಗೆ ಪದವಿಪೂರ್ವ ಕಾಲೇಜಿನ ನಿರ್ದೇಶಕ ಡಾ. ಡಿ.ಎಸ್. ಜಯಂತ್, ಸಂಸ್ಥೆಯ ಕಾರ್ಯದರ್ಶಿ ಡಿ.ಎಸ್. ಹೇಮಂತ್ ಹಾಗೂ ಅಧ್ಯಕ್ಷ ಡಿ.ಎಸ್. ಪ್ರಶಾಂತ್ ಶುಭ ಕೋರಿದ್ದಾರೆ.

error: Content is protected !!