ದಾವಣಗೆರೆ, ಜೂ. 2 – ಮಂಗಳ ವಿದ್ಯಾಸಂಸ್ಥೆಯ ಸಂಸ್ಥೆಯ ಶ್ರೀ ದುರ್ಗಾ ಇನ್ಸ್ಟಿಟ್ಯೂಟ್ ಆಫ್ ಪ್ಯಾರಾ ಮೆಡಿ ಕಲ್ ಸೈನ್ಸಸ್ ಕಾಲೇಜಿನ ವತಿಯಿಂದ ಕಲಿಕೆಯ ಜೊತೆಗೆ ಕಲೆಗಳ ಸಂಭ್ರಮ ಶ್ರೀ ದುರ್ಗಾ ಕಲರವ’ ಕಾಲೇಜಿನ ವಾರ್ಷಿಕೋತ್ಸವ ಕಾರ್ಯಕ್ರಮವು ಕುವೆಂಪು ಕನ್ನಡ ಭವನದಲ್ಲಿ ನಡೆಯಿತು.
ಕಾರ್ಯಕ್ರಮವನ್ನು ದಾವಣಗೆರೆ ವಿಶ್ವವಿದ್ಯಾಲಯದ ಹಿರಿಯ ಪ್ರಾಧ್ಯಾಪಕ ರಾದ ಡಾ.ಗಾಯತ್ರಿ ದೇವರಾಜ್ ಉದ್ಘಾಟಿಸಿದರು. ಪ್ರಾಸ್ತಾವಿಕ ನುಡಿಯನ್ನು ನಿರ್ದೇಶಕ ಸತೀಶ್ ಪಾಟೀಲ್, ಅಧ್ಯಕ್ಷತೆ ಮಂಗಳ ವಿದ್ಯಾಸಂಸ್ಥೆಯ ಅಧ್ಯಕ್ಷ ಜಿ.ಪ್ರಕಾಶ ವಹಿಸಿದ್ದರು. ನಿರ್ದೇಶಕರಾದ ತರುಣ್ ಶಂಕ್ರಪ್ಪ, ಕಾರ್ಯ ದರ್ಶಿ ವಿನಾಯಕ ಜಿ.ಡಿ, ಪುಟಾಣಿ ಗೂಗಲ್ ಕು.ಡಾ. ವೈದೃತಿನಾಗ್ ಕೋರಿಶೆಟ್ಟರ್, ರಾಜ ಶೇಖರಪ್ಪ ಎಕ್ಸಿಕ್ಯೂಟಿವ್ ಇಂಜಿನಿ ಯರ್ ಬೆಸ್ಕಾಂ ಉಪಸ್ಥಿತರಿದ್ದರು.
ಕಾರ್ಯಕ್ರಮದಲ್ಲಿ ಕಾರ್ತಿಕ ಆಚಾರ್ಯ ಎಂ.ಕಲ್ಲಹಳ್ಳಿ ನಿರೂಪಿಸಿದರು. ಉಪನ್ಯಾಸಕರಾದ ಸಾಕಮ್ಮ ಸ್ವಾಗತ ಭಾಷಣ ನೆರವೇರಿಸಿದರು. ಅಶ್ಪಖ್ ಅಬ್ದುಲ್ ಪ್ರತಿಜ್ಞಾ ವಿಧಿಯನ್ನು ನೆರವೇರಿಸಿದರು.