ಮುರುಘಾ ಮಠದಲ್ಲಿ ಇಂದಿನಿಂದ ಸಸಿ ನೆಡುವ ಪರಿಸರ ಸಪ್ತಾಹ

ಚಿತ್ರದುರ್ಗ  ಶ್ರೀ ಮುರುಘರಾಜೇಂದ್ರ ಬೃಹನ್ಮಠ ಹಾಗೂ ಎಸ್.ಜೆ.ಎಂ. ವಿದ್ಯಾಪೀಠದ ಸಹಯೋಗದಲ್ಲಿ ವಿಶ್ವ ಪರಿಸರದ ಅಂಗವಾಗಿ ಇಂದಿನಿಂದ ಜೂನ್ 5ರವರೆಗೆ ಸಸಿ ನೆಡುವ ಸಪ್ತಾಹವನ್ನು ಹಮ್ಮಿಕೊಳ್ಳಲಾಗಿದೆ.

ಪ್ರತಿದಿನ ಬೆಳಗ್ಗೆ 7 ರಿಂದ 9ರವರೆಗೆ ನಡೆಯಲಿದ್ದು, 31ರಂದು ಚಂದ್ರವಳ್ಳಿ ಪ್ರದೇಶ ಹಾಗೂ ಎಸ್.ಜೆ.ಎಂ. ಕಾಲೇಜು ಆವರಣದಲ್ಲಿ, ಜೂನ್ 1ರಂದು  ಶ್ರೀ ಜಯವಿಭವ ಶ್ರೀಗಳ ಕಲ್ಪವೃಕ್ಷ ವನ, ಶ್ರೀ ಬೃಹನ್ಮಠ ಪ್ರೌಢಶಾಲೆ ಮತ್ತು ಶ್ರೀ ಬೃಹನ್ಮಠ ಸಂಯುಕ್ತ ಪ.ಪೂ. ಕಾಲೇಜು ಆವರಣದಲ್ಲಿ, 2ರಂದು ಭಾನುವಾರ ಸೀಬಾರದ ಶ್ರೀ ಗುರುಪಾದ ಸ್ವಾಮಿಗಳವರ ಸ್ಮಾರಕ, ದನಗಳ ಜಾತ್ರೆ ಪ್ರದೇಶ ಹಾಗೂ ಎಸ್.ಜೆ.ಎಂ. ಆಂಗ್ಲ ಮಾಧ್ಯಮ ಶಾಲೆ ಆವರಣದಲ್ಲಿ ನಡೆಯಲಿದೆ.

ಜೂನ್ 3ರಂದು  ಬಸವೇಶ್ವರ ಆಸ್ಪತ್ರೆ ಆವರಣ, ಎಸ್.ಜೆ.ಎಂ. ಉದ್ಯೋಗಸ್ಥ ಮಹಿಳೆಯರ ವಸತಿ ನಿಲಯ ಹಾಗೂ ಎಸ್.ಜೆ.ಎಂ. ದಂತ ಮಹಾವಿದ್ಯಾಲಯದ ವಿದ್ಯಾರ್ಥಿ ನಿಲಯದಲ್ಲಿ, 4ರಂದು ಸೀಬಾರದ ಕೇತೇಶ್ವರ ಮಹಾಮಠದ ಪಕ್ಕ ಹಾಗು 5ರಂದು ಬುಧವಾರ ಶ್ರೀಮಠದ ಮುರುಘಾ ವನದಲ್ಲಿ ಸಸಿಗಳನ್ನು ನೆಡಲಾಗುವುದು ಎಂದು  ಪ್ರಕಟಣೆಯಲ್ಲಿ  ತಿಳಿಸಲಾಗಿದೆ.

error: Content is protected !!