ನಾವೀಗ ಬದುಕುತ್ತಿರುವುದು ಪೈಪೋ ಟಿಯ ಪ್ರಪಂಚ ದಲ್ಲಿ, ಇಲ್ಲಿ ನೆಲೆಯೂರಿ ಬಾಳ ಬೇಕೆಂದರೆ ನಿತ್ಯ ನಮ್ಮ ಬೌದ್ಧಿಕ ಸಾಮರ್ಥ್ಯವನ್ನು ಒರೆಗಲ್ಲಿಗೆ ತೀಡುತ್ತಿರಲೇ ಬೇಕಾದದ್ದು ಅನಿವಾರ್ಯ ಹಾಗೂ ಅತ್ಯಗತ್ಯ. ಅದ ರೊಂದಿಗೆ ಹೊಸ, ಹೊಸ ಕೌಶಲ್ಯಗಳನ್ನು ರೂಢಿಸಿ ಕೊಳ್ಳುತ್ತಿದ್ದರೇನೇ ನಮ್ಮ ಸ್ಥಾನವನ್ನು ಸುಸ್ಥಿರವಾಗಿಟ್ಟುಕೊಳ್ಳಲು ಸಾಧ್ಯ.
ಸಮಾಜದ ಧೋರಣೆ ನಾವು ಸೋತರೆ ನಾನು ಮೊದಲೇ ಹೇಳಿದ್ದೆ ಎನ್ನುತ್ತಾರೆ, ನಾವು ಗೆದ್ದರೆ ಅವರಲ್ಲಿ ಪ್ರತಿಭೆ ಇದೆ ಅಂತ ನನಗೆ ಗೊತ್ತಿತ್ತು ಗ್ಯಾರಂಟಿ ಸಕ್ಸಸ್ ಆಗ್ತಾನೆ ಅಂತ ಮೊದಲೇ ಊಹಿಸಿದ್ದೇ ಎನ್ನುತ್ತಾರೆ.
ಜಗತ್ತಿನ ಇತಿಹಾಸದ ಪುಟಗಳನ್ನೊಮ್ಮೆ ತಿರುವಿ ನೋಡಿದಾಗ ಬಡತನದಲ್ಲಿ ಹುಟ್ಟಿ, ಕಷ್ಟದಿಂದ ಬದುಕಿ, ಮಹಾನ್ ಸಾಧಕರೆನಿಸಿಕೊಂಡವರ ಪಟ್ಟಿ ಸಾಕಷ್ಟು ದೊಡ್ಡದು. ಉದಾಹರಣೆಗೆ ಅಲೆಕ್ಸಾಂಡರ್, ನೆಪೋಲಿಯನ್, ಚಾಣಕ್ಯ, ಅಶೋಕ, ಚಾರ್ಲಿ ಚಾಪ್ಲಿನ್, ಥಾಮಸ್ ಅಲ್ವಾ ಎಡಿಸನ್, ಸಾಕ್ರೆಟಿಸ್, ತೇನ್‌ಸಿಂಗ್, ಕಲ್ಪನಾ ಚಾವ್ಲಾ ಹೀಗೆಯೇ ದೊಡ್ಡ ಪಟ್ಟಿ ಬೆಳೆಯುತ್ತಲೇ ಹೋಗುತ್ತದೆ. ಅಂದ ಹಾಗೇ ಈ ಜಗತ್ತಿನಲ್ಲಿ ಯಶಸ್ಸು ಸಾಧಿಸಿರುವ ಎಲ್ಲರೂ ನಮ್ಮ ನಿಮ್ಮಂತೆ ಸಾಮಾನ್ಯ ಜನರೇ, ಅವರೇನು ವಿಶೇಷವಾಗಿ ರೂಪಗೊಂಡು ಬಂದವರಲ್ಲ. ಒಂದು ವಿಷಯ ನೆನಪಿರಲಿ, ಬದುಕಿನಲ್ಲಿ ಯಾರಿಗೆ ಆಗಲಿ ಸದಾಕಾಲ ಸುಖವೂ ಇರುವುದಿಲ್ಲ, ಕಷ್ಟವೂ ಇರುವುದಿಲ್ಲ, ಒಂದು ಮಾತಿನಲ್ಲಿ ಹೇಳುವುದಾದರೆ ಬದುಕೆನ್ನುವುದು ಸುಖ ದುಃಖಗಳೆರಡು ಬೆರೆತಿರುವಂತದ್ದು, ಉದಾಹರಣೆಗೆ ಆ ಹುಡುಗ ಚಿಕ್ಕವನಿದ್ದಾಗ ಬಡತನದಿಂದಾಗಿ ಹುಣಸೆ ಬೀಜ ಆಯಲು ಹೋಗುತ್ತಿದ್ದ, ಮನೆ ಮನೆಗೆ ದಿನಪತ್ರಿಕೆ ಹಂಚುತ್ತಿದ್ದ, ಮುಂದೆ ಓದಿಕೊಂಡು ವಿಜ್ಞಾನಿಯಾಗಿ ಹೆಸರು ಮಾಡಿದ, ಆಮೇಲೆ ಭಾರತದ ರಾಷ್ಟ್ರಪತಿಯೂ ಆದ ಅವರೇ ಡಾ. ಎಪಿಜೆ ಅಬ್ದುಲ್ ಕಲಾಂ.
– ಜೆಂಬಿಗಿ ಮೃತ್ಯುಂಜಯ, ದಾವಣಗೆರೆ.