ಸುಶ್ರಾವ್ಯ ಸಂಗೀತ ವಿದ್ಯಾಲಯದ `ಕನ್ನಡದಾರತಿ’ ಗೀತಗಾಯನ ತರಬೇತಿ

ದಾವಣಗೆರೆ, ಮೇ 28- ನಮ್ಮ ಚೆಲುವ ಕನ್ನಡ ನಾಡು `ಕರ್ನಾಟಕ’ ಎಂದು ಮರುನಾಮಕರಣಗೊಂಡು 50 ವರ್ಷಗಳಾಗಿದ್ದು, ಕರ್ನಾಟಕದ ಈ ಸುವರ್ಣ ಸಂಭ್ರಮದ ಅಂಗವಾಗಿ ವರ್ಷ ಪೂರ್ತಿ ಕನ್ನಡದ ಹಬ್ಬವನ್ನು ಆಚರಿಸಲಾಗುತ್ತಿದೆ.

ಈ ಸಂಭ್ರಮವನ್ನು ಅರ್ಥಪೂರ್ಣಗೊಳಿ ಸಲು ನಗರದ ಸುಶ್ರಾವ್ಯ ಸಂಗೀತ ವಿದ್ಯಾಲ ಯವು `ಕನ್ನಡದಾರತಿ’ ಎಂಬ ವಿನೂತನ ಪರಿಕಲ್ಪನೆಯೊಂದನ್ನು ಯೋಜಿಸಿದೆ. ಇದರ ಅಡಿಯಲ್ಲಿ ವರ್ಷಪೂರ್ತಿ ಕನ್ನಡ ನಾಡು-ನುಡಿ ಮಹತ್ವವನ್ನು ಬಿಂಬಿಸುವ 50 ಆಯ್ದ ಗೀತೆಗಳ ಗಾಯನ ತರಬೇತಿ ಹಮ್ಮಿಕೊಳ್ಳಲಾಗಿದೆ. ಪ್ರತಿ ಶಿಬಿರದಲ್ಲಿ 5 ಗೀತೆಗಳ ತರಬೇತಿ ನೀಡಲಿದ್ದು ಒಟ್ಟು 10 ಶಿಬಿರಗಳನ್ನು ಆಯೋಜಿಸಲಾಗುವುದು. 

ಪ್ರಥಮ ತರಬೇತಿ ಶಿಬಿರ ಕನ್ನಡದಾರತಿ- 1 `ಸಾವಿರದ ಶರಣವ್ವ ಕನ್ನಡದ ತಾಯೆ’ ಎಂಬ ಶೀರ್ಷಿಕೆಯಡಿಯಲ್ಲಿ ನಡೆಯಲಿದ್ದು, ಈ ಶಿಬಿರದಲ್ಲಿ ಕನ್ನಡದ ಪ್ರಸಿದ್ಧ ಕವಿಗಳ 5 ಗೀತೆಗಳನ್ನು ಕರೋಕೆಯೊಂದಿಗೆ ಹಾಡುವ ತರಬೇತಿಯನ್ನು  ನೀಡಲಾಗಿದೆ.

ಉಳಿದ 9 ಶಿಬಿರಗಳನ್ನು ಶಾಲಾ-ಕಾಲೇಜು ಮಕ್ಕಳಿಗೆ ಹಾಗೂ ಸಂಘ-ಸಂಸ್ಥೆಗಳ ಸದಸ್ಯರಿಗೆ ಏರ್ಪಡಿಸಲು ಯೋಜಿಸಿದ್ದು, ಆಸಕ್ತರು ತಮ್ಮ ಸಂಸ್ಥೆಗಳಲ್ಲಿ ಆಯೋಜಿಸಬಹುದಾಗಿದೆ.

ಪ್ರತಿ ಶಿಬಿರ 2 ದಿನ ನಡೆಯಲಿದ್ದು, ಈ ಶಿಬಿರದಲ್ಲಿ 5 ಗೀತೆಗಳ ಗಾಯನ ತರಬೇತಿ ನೀಡಲಾಗುವುದು. ದಾವಣಗೆರೆಯ ಯಾವುದೇ ಸರ್ಕಾರಿ/ಅನುದಾನಿತ/ಅನುದಾನ ರಹಿತ ಶಾಲೆ, ಪಿಯುಸಿ ಅಥವಾ ಪದವಿ ಕಾಲೇಜುಗಳು ಈ ಶಿಬಿರವನ್ನು ಆಯೋಜಿಸಬಹುದಾಗಿದೆ. ಮಹಿಳಾ ಸಂಘಟನೆಗಳಿಗೂ ಅವಕಾಶವಿದೆ. ದಾವಣಗೆರೆ ಸುತ್ತ ಮುತ್ತಲಿನ ಹಳ್ಳಿಗಳಲ್ಲಿರುವ ಶಾಲಾ ಕಾಲೇಜುಗಳು ಇದರ ಪ್ರಯೋಜನ ಪಡೆಯಬಹುದಾಗಿದೆ. 

ಸುಶ್ರಾವ್ಯ ಸಂಗೀತ ವಿದ್ಯಾಲಯ ನಿರ್ದೇ ಶಕರಾದ ಶ್ರೀಮತಿ ಯಶಾ ದಿನೇಶ್  ಅವರು ಗಾಯನದ ತರಬೇತಿಯನ್ನು  ನೀಡಲಿದ್ದಾರೆ. ವಿವರಗಳಿಗೆ 9449808886ಗೆ ಸಂದೇಶದ ಮೂಲಕ ಸಂಪರ್ಕಿಸಬಹುದು.

error: Content is protected !!