`ನಮ್ಮೆಲ್ಲರ ನಡಿಗೆ ಹಾಸನದ ಕಡೆಗೆ’ ಇಂದು ಹಾಸನದತ್ತ ಪ್ರಯಾಣ

ದಾವಣಗೆರೆ, ಮೇ 28- ಸಂಸದ ಪ್ರಜ್ವಲ್ ರೇವಣ್ಣ ಅವರ ಬಂಧನ ಮತ್ತು ಹೆಣ್ಣು ಮಕ್ಕಳ ಘನತೆಯ ರಕ್ಷಣೆಗೆ ಆಗ್ರಹಿಸಿ, ಪ್ರಗತಿಪರ ಸಂಘಟನೆಗಳ ಒಕ್ಕೂಟದ ವತಿಯಿಂದ ನಾಡಿದ್ದು ದಿನಾಂಕ 30 ರಂದು `ನಮ್ಮೆಲ್ಲರ ನಡಿಗೆ ಹಾಸನದ ಕಡೆಗೆ’ ಹಾಸನ ಚಲೋ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ ಎಂದು ಸಿಐಟಿಯು ಮುಖಂಡ ಕೆ.ಹೆಚ್. ಆನಂದರಾಜ್ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ನಾಳೆ ದಿನಾಂಕ 29 ರ ಬುಧವಾರ ರಾತ್ರಿ ದಾವಣಗೆರೆಯಿಂದ ಹಾಸನಕ್ಕೆ ತೆರಳಿ ಮೇ 30 ರಂದು ಬೆಳಿಗ್ಗೆ 10.30 ಕ್ಕೆ ಹಾಸನ ಮಹಾರಾಜ ಪಾರ್ಕ್‌ನಿಂದ ಡಿಸಿ ಕಚೇರಿಯವರೆಗೆ ಮೆರವಣಿಗೆ ಮೂಲಕ ಸಾಗಿ, ನಂತರ ಬೃಹತ್ ಬಹಿರಂಗ ಸಭೆ ನಡೆಸಲಾಗುವುದು. ಸಭೆಯಲ್ಲಿ ಸುಮಾರು 10 ಸಾವಿರ ಜನ ಸೇರುವ ನಿರೀಕ್ಷೆ ಇದೆ ಎಂದು ಹೇಳಿದರು.

ಗೊತ್ತಿದ್ದು ಗೊತ್ತಿದ್ದೂ ಪ್ರಜ್ವಲ್ ಎಂಬ ಕಾಮ ಪಿಪಾಸುವನ್ನು ಪೋಷಿಸಿ ಬೆಳೆಸಿದ ದೇವೇಗೌಡ ಕುಟುಂಬ ಮತ್ತು ಅಧಿಕಾರದ ದುರಾಸೆಗೆ ಟಿಕೆಟ್ ನೀಡಿ ಸಮರ್ಥಿಸಿಕೊಂಡ ಮೋದಿ ಹಾಗೂ ಬಿಜೆಪಿ ನಾಡಿನ ಮಹಿಳೆಯ ರಲ್ಲಿ ಕ್ಷಮೆ ಕೇಳಬೇಕು. ಯಾವುದೇ ರಾಜಿಗೆ ಅವಕಾಶ ಇಲ್ಲದಂತೆ ಪ್ರಜ್ವಲ್ ರೇವಣ್ಣ ಪ್ರಕರ ಣದ ತನಿಖೆ, ಕ್ರಮ, ವಿಚಾರಣೆಯನ್ನು ರಾಜ್ಯ ಸರ್ಕಾರ ತ್ವರಿತಗತಿಯಲ್ಲಿ ಮುನ್ನಡೆಸಬೇಕು. ಎಲ್ಲಿದ್ದರೂ ಬಿಡದೇ ಆತನನ್ನು ಕೇಂದ್ರ ಸರ್ಕಾರ ಹಿಡಿದು ತರಬೇಕೆಂದು ಆಗ್ರಹಿಸಿದರು.

ಬದುಕು ಛಿದ್ರಗೊಂಡಿರುವ ಮಹಿಳೆ ಯರಿಗೆ ಆತ್ಮವಿಶ್ವಾಸ ತುಂಬುವ ನಿಟ್ಟಿನಲ್ಲಿ ಮಹಿಳಾ ಆಯೋಗ ಮತ್ತು ಸರ್ಕಾರ ವಿಶ್ವಾಸ ಪೂರ್ಣ ಹೆಜ್ಜೆಗಳನ್ನು ಇಡಬೇಕು. ಹೆಣ್ಣುಮಕ್ಕಳ ಮೇಲಿನ ದೌರ್ಜನ್ಯಗಳನ್ನು ನಿಯಂತ್ರಿಸಲು ಸರ್ಕಾರವು ಸಮಗ್ರ ಹಾಗೂ ಪರಿಣಾಮಕಾರಿ ಕಾರ್ಯ ಯೋಜನೆ ರೂಪಿಸಿ, ಸಮರೋಪಾದಿ ಯಲ್ಲಿ ಕಾರ್ಯೋನ್ಮುಖರಾಗಬೇಕೆಂದು ಹೇಳಿದರು. ಹೆಣ್ಣುಮಕ್ಕಳ ಬದುಕು ಮತ್ತು ಘನತೆ ಕಾಪಾಡುವುದು ನಮ್ಮೆಲ್ಲರ ಆದ್ಯತೆ ಯಾಗ ಬೇಕು. ಸಮಾಜವು ಮೌನ ಮುರಿದು ಲಿಂಗ ಸಮಾನತೆಗಾಗಿ ಧ್ವನಿ ಎತ್ತಬೇಕೆಂದು ಒತ್ತಾಯಿಸಲಾಗುವುದು ಎಂದರು.

ಸುದ್ದಿಗೋಷ್ಠಿಯಲ್ಲಿ ಮಧು ತೊಗಲೇರಿ, ಪವಿತ್ರ, ಮಮತ, ಸುರೇಶ್, ಅರವಿಂದ್ ಉಪಸ್ಥಿತರಿದ್ದರು.

error: Content is protected !!