ದಾವಣಗೆರೆ, ಮೇ 27 – ಅಸಮರ್ಥ ಮಕ್ಕಳ ಏಳಿಗೆಯಾಗಬೇಕು ಎನ್ನುವ ಸದುದ್ಧೇಶದಿಂದ ವಿಸ್ತಾರವಾದ ಸೂಕ್ತ ಸ್ಥಳದ ಅವಶ್ಯಕತೆ ಇರುವುದನ್ನು ಮನಗಂಡು ಸಮಾಜದ ಸತ್ಕಾರ್ಯಕ್ಕೆಂದು ನಗರದ ದಿ. ದಕ್ಷಿಣಾಮೂರ್ತಿ ಎಸ್. ಅವರ ಇಚ್ಛೆಯಂತೆ 2.29 ಎಕರೆ ಭೂಮಿಯನ್ನು `ಸಂವೇದ’ ಸಂಸ್ಥೆಗೆ ಅಗತ್ಯ ಭೂಮಿಯನ್ನು ದೇಣಿಗೆಯಾಗಿ ನೀಡಿರುವ ಸರೋಜಿನಿ ದಕ್ಷಿಣಾಮೂರ್ತಿ ಅವರನ್ನು ಸಂವೇದಾ ಸಂಸ್ಥೆಯಿಂದ ಗೌರವಿಸಲಾಯಿತು.
ಸರೋಜಿನಿ ಅವರ ಹೃದಯ ವೈಶಾಲ್ಯತೆಗೆ ಮೆಚ್ಚಿ ಸಂಸ್ಥೆಯು ಇನ್ನುಮುಂದೆ `ಎಂ.ಎಸ್.ಡಿ. ಸಂವೇದ ತರಬೇತಿ ಹಾಗು ಸಂಶೋಧನಾ ಕೇಂದ್ರ’ ಎಂದು ಗುರುತಿಸಿಕೊಳ್ಳುತ್ತದೆಂದು ತಿಳಿಸಿದರು.