ವಕೀಲರು, ನ್ಯಾಯಾಧೀಶರು ಅನ್ಯೋನ್ಯವಾಗಿರಬೇಕು

ವಕೀಲರು, ನ್ಯಾಯಾಧೀಶರು ಅನ್ಯೋನ್ಯವಾಗಿರಬೇಕು

ಹರಪನಹಳ್ಳಿ ಕಾರ್ಯಕ್ರಮದಲ್ಲಿ ಹಿರಿಯ ಸಿವಿಲ್ ನ್ಯಾಯಾಧೀಶರಾದ ಆರ್‌. ಉಷಾರಾಣಿ

ಹರಪನಹಳ್ಳಿ, ಮೇ 27- ನ್ಯಾಯಾಧೀಶರ ಮತ್ತು ವಕೀಲರ ಸಂಬಂಧ ಪರಸ್ಪರ ಅನ್ಯೋನ್ಯವಾಗಿರಬೇಕು ಎಂದು ಹಿರಿಯ ಸಿವಿಲ್ ನ್ಯಾಯಾಧೀಶರಾದ ಆರ್‌. ಉಷಾರಾಣಿ ಹೇಳಿದರು.

ಪಟ್ಟಣದ ನ್ಯಾಯಾಲಯದ ಆವರಣದಲ್ಲಿ ವಕೀಲರ ಸಂಘದಿಂದ ಆಯೋಜಿಸಿದ್ದ ಉಭಯ ನ್ಯಾಯಾಲಯದ ನ್ಯಾಯಾಧೀಶರ ಸ್ವಾಗತ ಸಮಾರಂಭದಲ್ಲಿ ಸ್ವಾಗತ ಸ್ವೀಕರಿಸಿ ಅವರು ಮಾತನಾಡಿದರು.

ನಾನು ನನ್ನ ವೃತ್ತಿ ಜೀವನವನ್ನು ಪ್ರಾಮಾಣಿಕವಾಗಿ ನಡೆಸಿಕೊಂಡು ಹೋಗುತ್ತೇನೆ ಎಂದು ನ್ಯಾಯಾಧೀಶರು ವಿಶ್ವಾಸ ನೀಡಿದರು.

ಕಿರಿಯ ಸಿವಿಲ್ ನ್ಯಾಯಾಧೀಶರಾದ ಎಸ್.ಪಿ. ಮನು ಶರ್ಮಾ ಮಾತನಾಡಿ, ಕೊಪ್ಪಳ ಮತ್ತು  ಬೈಲಹೊಂಗಳ ತಾಲ್ಲೂಕಿನಲ್ಲಿ ನ್ಯಾಯಾಧೀಶರಾಗಿ ಕಾರ್ಯನಿರ್ವಹಿಸಿ ಬಂದಿದ್ದೇನೆ. ಇಲ್ಲೂ ಸಹ ನನ್ನ ವೃತ್ತಿಯನ್ನು ಪ್ರಾಮಾಣಿಕವಾಗಿ ನಿಭಾಯಿಸುತ್ತೇನೆ ಎಂದು ತಿಳಿಸಿದರು.

ಈ ವೇಳೆ ವಕೀಲರ ಸಂಘದ ಅಧ್ಯಕ್ಷ ರಾಮನಗೌಡ ಪಟೇಲ್, ಕಾರ್ಯದರ್ಶಿ ಜಿ.ಎಸ್.ಎಂ. ಕೊಟ್ರಯ್ಯ, ಹಿರಿಯ ವಕೀಲರಾದ ಪಿ. ಕೃಷ್ಣಮೂರ್ತಿ, ಕೆ. ಜಗದಪ್ಪ, ಪಿ. ಜಗದೀಶ್ ಗೌಡ್ರ, ಕೆ. ಬಸವರಾಜ್, ಕಣವಿಹಳ್ಳಿ ಮಂಜು ನಾಥ್, ಕೆ. ಚಂದ್ರಗೌಡ್ರು ಮತ್ತು ಇತರೆ ಹಿರಿಯ-ಕಿರಿಯ ವಕೀಲರು ಇದ್ದರು.

error: Content is protected !!