ದಾವಣಗೆರೆ, ಮೇ 27- ನಗರದ ಜಿಎಂ ವಿಶ್ವವಿದ್ಯಾಲಯದಲ್ಲಿ `ಮಲ್ಲಿಕಾ 24.0 ಸಾಂಸ್ಕೃತಿಕ ಹಬ್ಬ’ವು ಶುಕ್ರವಾರ ಮತ್ತು ಶನಿವಾರ ಅದ್ಧೂರಿಯಾಗಿ ನಡೆಯಿತು.
ಕಾಲೇಜಿನ ಜಿ. ಮಲ್ಲಿಕಾರ್ಜುನಪ್ಪ ಸಭಾಂಗಣದಲ್ಲಿ ನಡೆದ ಇಂಟರ್ ಕಾಲೇಜ್ ಫೆಸ್ಟಿವಲ್ನಲ್ಲಿ ನಗರದ ಪ್ರತಿಷ್ಠಿತ ಕಾಲೇಜುಗಳ ವಿದ್ಯಾರ್ಥಿಗಳು ಸಾಂಸ್ಕೃತಿಕ ಚಟುವಟಿಕೆಗಳಲ್ಲಿ ಭಾಗವಹಿಸಿ ಕಾರ್ಯಕ್ರಮಕ್ಕೆ ಮೆರಗು ನೀಡಿದರು.
ಎರಡು ದಿನಗಳ ಕಾರ್ಯಕ್ರಮದಲ್ಲಿ ವಿಜೇತರಿಗೆ ಬಹುಮಾನ ನೀಡಿದರು. ಸಂಜೆ ಹೆಸರಾಂತ ಸಂಗೀತಕಾರ ಅರ್ಜುನ್ ಜನ್ಯ ಮತ್ತು ಹಿನ್ನೆಲೆ ಗಾಯಕರಾದ ಡಾ. ಶಮಿತಾ ಮಲ್ನಾಡ್ ಅವರಿಂದ ರಸಮಂಜರಿ ಕಾರ್ಯಕ್ರಮ ನಡೆಯಿತು.
ಕಾರ್ಯಕ್ರಮದಲ್ಲಿ ಸಂಸದ ಜಿ.ಎಂ. ಸಿದ್ದೇಶ್ವರ, ಶ್ರೀಶೈಲ ಎಜುಕೇಶನಲ್ ಟ್ರಸ್ಟ್ ಅಧ್ಯಕ್ಷ ಜಿ.ಎಂ. ಪ್ರಸನ್ನಕುಮಾರ್, ಆಡಳಿತಾಧಿಕಾರಿ ವೈ.ಯು. ಸುಭಾಶ್ಚಂದ್ರ, ವಿವಿಯ ಉಪಕುಲಪತಿ ಡಾ. ಮಹೇಶಪ್ಪ, ಕಾಲೇಜಿನ ಪ್ರಾಚಾರ್ಯ ಡಾ.ಎಂ.ಬಿ. ಸಂಜಯ್ ಪಾಂಡೆ, ರಿಜಿಸ್ಟ್ರಾರ್ ಡಾ.ಬಿ.ಎಸ್. ಸುನೀಲ್ ಕುಮಾರ್, ಕಾರ್ಯಕ್ರಮದ ಸಂಯೋಜಕರಾದ ಡಾ.ಎಚ್. ಎಸ್. ಕಿರಣ್ ಕುಮಾರ್, ಎಂ. ಸಂತೋಷ್ ಕುಮಾರ್, ವಿವಿಧ ಕಾಲೇಜಿನ ಪ್ರಾಚಾರ್ಯರು, ಗಣ್ಯರು ಹಾಗೂ ವಿದ್ಯಾರ್ಥಿಗಳು ಇದ್ದರು.