ಖೋ-ಖೋ ಅಸೋಸಿಯೇಷನ್ ರಾಜ್ಯಾಧ್ಯಕ್ಷ ಲೋಕೇಶ್
ದಾವಣಗೆರೆ, ಮೇ 26- ತೀರ್ಪುಗಾರರು ಕ್ರೀಡಾ ಪಟುಗಳ ಶ್ರಮಕ್ಕೆ ನ್ಯಾಯಯುತ ಫಲಿತಾಂಶ ನೀಡಬೇಕು ಎಂದು ಖೋ-ಖೋ ಅಸೋಸಿಯೇಷನ್ ರಾಜ್ಯಾಧ್ಯಕ್ಷ ಲೋಕೇಶ್ ಹೇಳಿದರು.
ನಗರದ ಸಿದ್ದಗಂಗಾ ಶಾಲೆಯಲ್ಲಿ ರಾಜ್ಯ ಖೋ-ಖೋ ಅಸೋಸಿಯೇಷನ್ ಹಾಗೂ ಚಾಲೆಂ ಜೆರ್ಸ್ ಸ್ಫೋರ್ಟ್ಸ್ ಕ್ಲಬ್ ಆಶ್ರಯದಲ್ಲಿ ಈಚೆಗೆ ನಡೆದ ಆಲ್ ಇಂಡಿಯಾ ಖೋ-ಖೋ ರೆಫರಿ ಪರೀಕ್ಷೆ ಮತ್ತು ರಾಜ್ಯ ಖೋ-ಖೋ ರೆಫರಿ ಕಾರ್ಯಾ ಗಾರವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ರೆಫರಿಗಳು ಕೇವಲ ಪ್ರಮಾಣ ಪತ್ರಕ್ಕೆ ಸೀಮಿತವಾಗದೇ ಶಿಸ್ತು ಮತ್ತು ಸಮಯ ಪ್ರಜ್ಞೆಯಿಂದ ತೀರ್ಪು ನೀಡಬೇಕು ಮತ್ತು ಖೋ-ಖೋ ನಿಯಮಗಳ ಬಗ್ಗೆ ಹೆಚ್ಚೆಚ್ಚು ತಿಳಿದುಕೊಳ್ಳುವಂತೆ ಎಂದು ಸಲಹೆ ನೀಡಿದರು.
ಕೆಎಸ್ಕೆಕೆಎ ಅಧ್ಯಕ್ಷ ಪುರುಷೋತ್ತಮ್ ಮಾತನಾಡಿ, ಕಾರ್ಯಾಗಾರದಲ್ಲಿ ಕಲಿತ ಜ್ಞಾನವನ್ನು ವ್ಯರ್ಥ ಮಾಡದೇ ಪ್ರತಿ ದಿನ ಮಕ್ಕಳಿಗೆ ತರಬೇತಿ ನೀಡಬೇಕು ಎಂದರು. ಚಾಲೆಂಜರ್ಸ್ ಸ್ಫೋರ್ಟ್ ಕ್ಲಬ್ನ ಅಧ್ಯಕ್ಷ ತ್ರಿಲೋಕ್ ಸಿಂಗ್ ಮಾತನಾಡಿ, ಇಂದಿನ ಕ್ರೀಡಾಪಟುಗಳಿಗೆ ಎಲ್ಲ ತರಹದ ಸೌಕ ರ್ಯಗಳಿವೆ. ಒಳ್ಳೆಯ ತರಬೇತಿ ಹಾಗೂ ಕಾರ್ಯಾ ಗಾರದ ಸಹಾಯದಿಂದ ಉತ್ತಮ ಕ್ರೀಡಾಪಟು ಹಾಗೂ ರೆಫರಿಗಳಾಗಿ ಎಂದು ಕರೆ ನೀಡಿದರು.
ಮಲ್ಲಿಕಾರ್ಜುನಯ್ಯ, ಪ್ರಶಾಂತ್ ಪಠಾಣ್ಕರ್, ಬಸವರಾಜ್ ಚಿಲಕಾಂತ್ ಮಠ, ಸಿದ್ದಲಿಂಗ ಮೂರ್ತಿ, ಶ್ರೀನಿವಾಸ ಕೆ.ಸಿ. ಇಟ್ಟಿಗುಡಿ, ಜಿಲ್ಲಾ ಖೋ-ಖೋ ಸಂಸ್ಥೆಯ ಜಿ.ಡಿ.ಎಸ್. ಮೂರ್ತಿ, ಚಾಲೆಂಜರ್ಸ್ ಸ್ಫೋರ್ಟ್ಸ್ ಕ್ಲಬ್ನ ಪದಾಧಿಕಾರಿಗಳು ಇದ್ದರು.
ಶ್ರೇಯಾ ಪ್ರಾರ್ಥಿಸಿದರು. ಡಿ.ಕೆ.ಕೆ.ಎ ಕಾರ್ಯದರ್ಶಿ ಜೆ. ರಾಮಲಿಂಗಪ್ಪ ಪ್ರಾಸ್ತಾವಿಕ ಮಾತನಾಡಿದರು. ಸಂಘಟನಾ ಕಾರ್ಯದರ್ಶಿ ಡಾ. ಚಂದ್ರಶೇಖರ್ ನಿರೂಪಿಸಿದರು. ಡಾ.ವೀರೇಂದ್ರ ವಂದಿಸಿದರು.