ಜಿಲ್ಲೆಯಲ್ಲಿ ಜೈವಿಕ ಗೊಬ್ಬರ ಮಾರಾಟ

ದಾವಣಗೆರೆ, ಮೇ 24- ಜಿಲ್ಲೆಯ ಜೈವಿಕ ಕೇಂದ್ರದಲ್ಲಿ, ಉತ್ತಮ ಗುಣಮಟ್ಟದ ಜೈವಿಕ ನಿಯಂತ್ರಕಗಳಾದ ಟ್ರೈಕೋಡರ್ಮ, ಸೂಡೊಮೋನಾಸ್ ಹಾಗೂ ಜೈವಿಕ ಗೊಬ್ಬರಗಳಾದ ದ್ರವರೂಪದ ಜೈವಿಕ ಗೊಬ್ಬರ, ಘನರೂಪದ ಜೈವಿಕ ಗೊಬ್ಬರ ಅಜಟೋಬ್ಯಾಕ್ಟರ್ ಜೈವಿಕ ಗೊಬ್ಬರ ಗಳನ್ನು ತಯಾರು ಮಾಡಿ ಇಲಾಖಾ ದರದಲ್ಲಿ ಮಾರಾಟ ಮಾಡಲಾಗುತ್ತದೆ.

ಇವುಗಳು ಮಣ್ಣಿನ ಜೈವಿಕ ಮತ್ತು ಭೌತಿಕ ಗುಣಗಳನ್ನು ಕಾಪಾಡಿ ಭೂಮಿಯ ಫಲವತ್ತತೆ ಹೆಚ್ಚಿಸುವಲ್ಲಿ, ಪ್ರಮುಖ ಪಾತ್ರ ನಿರ್ವಹಿಸುತ್ತದೆ. ಆಸಕ್ತ ರೈತರು ಉತ್ತಮ ಗುಣಮಟ್ಟದ ಜೈವಿಕ ನಿಯಂತ್ರಕ ಹಾಗೂ ಜೈವಿಕ ಗೊಬ್ಬರಗಳ ಸದುಪಯೋಗವನ್ನು ಪಡೆದುಕೊಳ್ಳಬೇಕು ಎಂದು ಹಿರಿಯ ಸಹಾಯಕ ತೋಟ ಗಾರಿಕೆ ನಿರ್ದೇಶಕರು ತಿಳಿಸಿ ದ್ದಾರೆ. ಹೆಚ್ಚಿನ ಮಾಹಿತಿಗಾಗಿ ಮೊ.ಸಂ:9611556835 ಸಂಪರ್ಕಿಸಬಹುದು.

error: Content is protected !!