ಹರಿಹರ, ಮೇ 24- ನಗರದ ಸರ್ಕಾರಿ ಉಪಕರಣಾಗಾರ ಮತ್ತು ತರಬೇತಿ ಕೇಂದ್ರವು ನೌಕರಿ ನಿರ್ವಹಣೆ ಮತ್ತು ಉದ್ಯೋಗಾವಕಾಶಗಳಿಗೆ ಮಹತ್ತರವಾದ ದಾರಿ ದೀಪವಾಗಿದೆ ಎಂದು ಕೇಂದ್ರದ ಕೆ.ಎಸ್. ಶಿವಕುಮಾರ್ ಮತ್ತು ಡಿ. ಗಣೇಶ್ ಅವರು ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.
ಜಿಟಿಟಿಸಿ ತರಬೇತಿ ಮತ್ತು ತರಗತಿ ನಡೆಸುವಲ್ಲಿ ಉತ್ತಮ ಗುಣಮಟ್ಟವನ್ನು ಕಾಪಾಡಿಕೊಳ್ಳಲು ಸೂಕ್ತ ಸಾಧನಗಳನ್ನು ಅಳವಡಿಸಿಕೊಂಡಿದೆ. ಉತ್ತಮ ಸೌಲಭ್ಯಗಳು, ಅನುಭವಿ ಶಿಕ್ಷಕರು ಮತ್ತು ನವೀನ ತಾಂತ್ರಿಕ ಸಾಧನಗಳೊಂದಿಗೆ ಈ ಕೇಂದ್ರವು ವಿದ್ಯಾರ್ಥಿಗಳಿಗೆ ಸಮಗ್ರ ಶಿಕ್ಷಣವನ್ನು ನೀಡುತ್ತಿದೆ ಎಂದರು.
1972 ರಲ್ಲಿ ಸ್ಥಾಪಿತವಾದ ಕರ್ನಾಟಕ ಸರ್ಕಾರ ಮತ್ತು ಡೆನ್ಮಾರ್ಕ್ ಸರ್ಕಾರದ ಡ್ಯಾನಿಷ್ ಜಂಟಿ ಉದ್ಯಮವಾಗಿದೆ. ಕರ್ನಾಟಕ ಸರ್ಕಾರವು ಕರ್ನಾಟಕದಾದ್ಯಂತ 30ಕ್ಕೂ ಹೆಚ್ಚು ಜಿಟಿಟಿಸಿ ಕೇಂದ್ರಗಳನ್ನು ಸ್ಥಾಪಿಸಿದೆ. ವಿಶ್ವದಾದ್ಯಂತ ಅಸ್ತಿತ್ವದಲ್ಲಿರುವ ಮತ್ತು ಹೊರಹೊಮ್ಮುವ ಕೈಗಾರಿಕೆಗಳಿಗೆ ನುರಿತ ಮಾನವ ಸಂಪನ್ಮೂಲ ಮತ್ತು ತಾಂತ್ರಿಕ ಸೇವೆಗಳನ್ನು ಒದಗಿಸುವುದು ಇದರ ಮುಖ್ಯ ಉದ್ದೇಶವಾಗಿದೆ.
ಈ ಕೇಂದ್ರದಲ್ಲಿ ತರಬೇತಿ ಪಡೆಯಲು ನಾಲ್ಕು ವಿವಿಧ ಕೋರ್ಸ್ಗಳಿದ್ದು ಅದರಲ್ಲಿ ಡಿಪ್ಲೋಮಾ ಇನ್ ಟೂಲ್ ಅಂಡ್ ಡೈ ಮೇಕಿಂಗ್, ಡಿಪ್ಲೋಮಾ ಇನ್ ಆಟೋ ಮೇಷನ್ ಅಂಡ್ ರೋಬೋಟಿಕ್ಸ್, ಡಿಪ್ಲೋಮಾ ಇನ್ ಪ್ರಿಸಿಷನ್ ಮ್ಯಾನ್ಯುಫ್ಯಾಕ್ಚರಿಂಗ್ ಮತ್ತು ಡಿಪ್ಲೋಮಾ ಇನ್ ಎಲೆಕ್ಟ್ರಿಕಲ್ ಅಂಡ್ ಎಲೆಕ್ಟ್ರಾನಿಕ್ಸ್ ಇಂಜಿನಿಯರಿಂಗ್ ಸೇರಿವೆ. ಎಸ್ಎಸ್ಎಲ್ಸಿ ಪಾಸಾದ ವಿದ್ಯಾರ್ಥಿಗಳು ಅರ್ಜಿ ಸಲ್ಲಿಸಲು ಇದೇ ದಿನಾಂಕ 27 ಕೊನೆಯ ದಿನವಾಗಿರುತ್ತದೆ.
ಪತ್ರಿಕಾಗೋಷ್ಠಿಯಲ್ಲಿ ಕೇಂದ್ರದ ಜಿ.ಪ್ರದೀಪ್, ಚರಣ್ ಅಂಗಡಿ, ಸಿ.ಎನ್.ಬಸವರಾಜ್, ನವೀನ್ ಕುಮಾರ್, ಶರದ್ ಎಸ್, ಹನುಮಂತರಾಜ್, ಗುರುಶಂಕರ್, ಸತೀಶ್ ನಾಯಕ್ ಮತ್ತು ಸುಮಾ ಕೆ.ಗುಡಿ ಉಪಸ್ಥಿತರಿದ್ದರು.