ರಾಜ್ಯದಲ್ಲಿ ಶಿಕ್ಷಣ ಕ್ಷೇತ್ರ ಹಾಳು ಮಾಡಿದ ಕಾಂಗ್ರೆಸ್: ಸಂಕನೂರ

ದಾವಣಗೆರೆ, ಮೇ 24- ಸಿದ್ಧರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರವು ರಾಜ್ಯದಲ್ಲಿ ಶಿಕ್ಷಣ ವ್ಯವಸ್ಥೆಯನ್ನು ಸಂಪೂರ್ಣ ಹಾಳು ಮಾಡಿದೆ ಎಂದು ವಿಧಾನ ಪರಿಷತ್ ಸದಸ್ಯ ಎಸ್.ವಿ. ಸಂಕನೂರು ಆರೋಪಿಸಿದರು.

ಶುಕ್ರವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಅಧಿಕಾರ ವಹಿಸಿಕೊಂಡ ಮೊದಲ ತಿಂಗಳಿನಿಂದಲೇ ಕಾಂಗ್ರೆಸ್ ಸರ್ಕಾರವು ಬಿಜೆಪಿ ವಿರುದ್ಧ ದ್ವೇಷದ ನಿರ್ಣಯ ಕೈಗೊಂಡು, ಹಿಂದೆ ಇದ್ದ ಶಾಲಾ ಪಠ್ಯಕ್ರಮವನ್ನು ಅನಗತ್ಯವಾಗಿ ಬದಲಾವಣೆ ಮಾಡಿತು ಎಂದರು.

ಎನ್‌ಇಪಿ ರದ್ದುಪಡಿಸಿ ಎಸ್‌ಇಪಿ ಜಾರಿ ಮಾಡಿದ್ದೂ ಸಹ ರಾಜಕೀಯ ಪ್ರೇರಿತ ನಿರ್ಣಯ. ಎಸ್ಸೆಸ್ಸೆಲ್ಸಿ ಹಾಗೂ ಪಿಯುಸಿಗೆ ಮೂರು ಪರೀಕ್ಷೆ ಮಾಡುವ ತಪ್ಪು ನಿರ್ಧಾರ ಕೈಗೊಳ್ಳಲಾಯಿತು.  5,8,9 ಹಾಗೂ 11ನೇ ತರಗತಿಗೆ ಇಲಾಖೆಯಿಂದಲೇ ಪರೀಕ್ಷೆ ನಡೆಸಬೇಕೆಂಬ ನಿರ್ಧಾರ ಜಾರಿ ಮಾಡುವಲ್ಲಿ ಸರ್ಕಾರ ವಿಫಲವಾಯಿತು ಎಂದು ದೂರಿದರು.

ಇತ್ತೀಚೆಗೆ ನಡೆದ ಎಸ್ಸೆಸ್ಸೆಲ್ಸಿ ಪರೀಕ್ಷೆ ವೇಳೆ ವೆಬ್‌ ಕಾಸ್ಟಿಂಗ್ ಮಾಡುವ ನಿರ್ಧಾರವನ್ನು ದಿಢೀರನೆ ತೆಗೆದುಕೊಂಡ ಪರಿಣಾಮ ವಿದ್ಯಾರ್ಥಿಗಳಲ್ಲಿ ಭಯ ಉಂಟಾಯಿತು. ಈ ಬಗ್ಗೆ  ಗಂಭೀರ ಚಿಂತನೆ ನಡೆಸದೇ ಶಿಕ್ಷಣ ಸಚಿವ ಮಧು ಬಂಗಾರಪ್ಪ ಅವರು ಏಕಪಕ್ಷೀಯ ನಿರ್ಧಾರಗಳನ್ನು ಕೈಗೊಂಡಿದ್ದರು ಎಂದರು.

ಶಿಕ್ಷಕ ಕ್ಷೇತ್ರಕ್ಕೆ ಡಾ.ವೈ.ಎ. ನಾರಾಯಣ ಸ್ವಾಮಿ ಸ್ಪರ್ಧಿಸಲಿದ್ದು, ಕ್ರಿಯಾಶೀಲ ವ್ಯಕ್ತಿಯಾದ ಅವರನ್ನು ಶಿಕ್ಷಕರು ಬೆಂಬಲಿಸುವಂತೆ ಕರೆ ನೀಡಿದರು. ಚುನಾವಣಾ ಚಾಣಕ್ಯರ ಸಲಹೆಯಂತೆ ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಆಡಳಿತ ನಡೆಸುತ್ತಿದೆ ಎಂದು ವಿಧಾನ ಪರಿಷತ್ ಮಾಜಿ ಸದಸ್ಯ, ಬಿಜೆಪಿ ಮುಖಂಡ ಅರುಣ್‌ ಶಹಾಪುರ ಆರೋಪಿಸಿದರು.

ಕಾಂಗ್ರೆಸ್‌ಗೆ ಮತ ಹಾಕಿದವರಿಗೆ ಒಂದು ಶಿಕ್ಷಣ ನೀತಿ, ಕಾಂಗ್ರೆಸ್ ಸಚಿವರ ಶಾಲಾ ಕಾಲೇ ಜುಗಳಲ್ಲಿ ಮತ್ತೊಂದು ಶಿಕ್ಷಣ ನೀತಿ ಅನುಸರಿ ಸಲಾಗುತ್ತಿದೆ. ಇದೆಲ್ಲವನ್ನೂ ಜನರು ಗಮನಿಸು ತ್ತಿದ್ದು, ಈ ಬಾರಿಯ ಶಿಕ್ಷಕರ ಕ್ಷೇತ್ರದ ಚುನಾವಣೆ ಯಲ್ಲಿ ತಕ್ಕ ಪಾಠ ಕಲಿಸಲಿದ್ದಾರೆ ಎಂದರು.

ಬಿಜೆಪಿ ಜಿಲ್ಲಾಧ್ಯಕ್ಷ ಎನ್.ರಾಜಶೇಖರ್, ಮಾಜಿ ಅಧ್ಯಕ್ಷ ಯಶವಂತರಾವ್ ಜಾಧವ್, ಧನಂಜಯ ಕಡ್ಲೇಬಾಳು, ಹೆಚ್.ಎನ್. ಶಿವಕುಮಾರ್, ಸಂತೋಷ್‌, ನವೀನ್, ಮಂಜು ಪೈಲ್ವಾನ್, ವಿಶ್ವಾಸ್ ಇತರರು ಪತ್ರಿಕಾಗೋಷ್ಠಿಯಲ್ಲಿ ಉಪಸ್ಥಿತರಿದ್ದರು.

error: Content is protected !!