ದಾವಣಗೆರೆ, ಮೇ 23 – ಹರಿಹರ ತಾಲ್ಲೂಕು ಸಲಗನಹಳ್ಳಿ ಗ್ರಾಮದಲ್ಲಿ ಇದೇ ಮೊದಲ ಬಾರಿಗೆ ಶ್ರೀ ಆಂಜನೇಯ ದೇವರ ನೂತನ ರಥೋತ್ಸವ ಅದ್ಧೂರಿಯಾಗಿ ಜರುಗಿತು.
ಶ್ರೀ ವಾಗೀಶಯ್ಯ ಸ್ವಾಮಿ ಹಾಗೂ ಮರುಳಸಿದ್ದಯ್ಯ ಸ್ವಾಮೀಜಿ ನೇತೃತ್ವದಲ್ಲಿ ರಥೋತ್ಸವ ಜರುಗಿತು.
ಶ್ರೀ ಮಾರುತಿ ಸೇವಾ ಟ್ರಸ್ಟ್ ಸಲಗನಹಳ್ಳಿ ಹಾಗೂ ಸುತ್ತಮುತ್ತಲಿನ ಗ್ರಾಮಸ್ಥರು ಸೇರಿದಂತೆ ಸಾವಿರಾರು ಭಕ್ತಾದಿಗಳು ನೆರೆದಿದ್ದರು.
ರಥೋತ್ಸವದ ಬಳಿಕ ದಾಸೋಹ, ಓಕಳಿ, ಮುಳ್ಳು, ಉರುಳು ಸೇವೆ, ಹರಕೆ ಸೇರಿ ಹಲವು ಕಾರ್ಯಕ್ರಮಗಳು ಜರುಗಿದವು.