ಜಗಳೂರಿನ ಆರೋಗ್ಯ ತಪಾಸಣಾ ಶಿಬಿರದಲ್ಲಿ ಡಾ. ಟಿ.ಜಿ. ರವಿಕುಮಾರ್
ಜಗಳೂರು, ಮೇ 23 – ತಾಲೂಕು ಗುರುಸಿದ್ದಾಪುರ ಗ್ರಾಮದಲ್ಲಿ ಪ್ರೀತಿ ಆರೈಕೆ ಟ್ರಸ್ಟ್ ಹಾಗು ಆರೈಕೆ ಆಸ್ಪತ್ರೆಯ ವತಿಯಿಂದ ಉಚಿತ ಆರೋಗ್ಯ ತಪಾಸಣಾ ಶಿಬಿರವನ್ನು ಆಯೋಜಿಸಲಾಗಿತ್ತು.
ಪ್ರೀತಿ ಆರೈಕೆ ಟ್ರಸ್ಟ್ ಅಧ್ಯಕ್ಷರೂ ಆಗಿರುವ ಜಗಳೂರಿನ ಮಾಜಿ ಶಾಸಕ ಟಿ. ಗುರುಸಿದ್ದ ನಗೌಡ ಹಾಗೂ ಜಗಳೂರು ಶಾಸಕ ದೇವೇಂದ್ರಪ್ಪ ಕಾರ್ಯಕ್ರಮವನ್ನು ಉದ್ಘಾಟನೆ ಮಾಡಿದರು.
ಶಿಬಿರವನ್ನು ಉದ್ದೇಶಿಸಿ ಮಾತನಾಡಿದ ಶಾಸಕ ದೇವೇಂದ್ರಪ್ಪ, ಗುರುಸಿದ್ದನಗೌಡ ಅವರ ಸಾಧನೆಗಳ ಬಗ್ಗೆ ನೆನೆದರು. ತಮಗೆ ಜಗಳೂರಿನಲ್ಲಿ ಮಾಡಿರುವ ಸಹಾಯ ಹಾಗೂ ರಾಜಕೀಯವಾಗಿ ಬೆಳೆಯಲು ಮಾಡಿರುವ ಆಶೀರ್ವಾದಗಳನ್ನು ಕೂಡ ನೆನೆದರು.
ಡಾ. ಟಿ.ಜಿ. ರವಿಕುಮಾರ್ ನಡೆಸುತ್ತಿರುವ ಆರೋಗ್ಯ ಶಿಬಿರಗಳ ಕುರಿತಂತೆ ಮೆಚ್ಚುಗೆ ವ್ಯಕ್ತಪಡಿಸಿದರು. ಮನೆಯ ಬಾಗಿಲಿಗೆ ವೈದ್ಯರನ್ನು ಕರೆತಂದು ರೋಗಿಗಳನ್ನು ತಪಾಸಣೆ ಮಾಡುವ ಆರೈಕೆ ಆಸ್ಪತ್ರೆಯ ಉದ್ದೇಶವನ್ನು ಶ್ಲ್ಯಾಘಿಸಿದರು.
ಡಾ. ಟಿ.ಜಿ. ರವಿಕುಮಾರ್ ಮಾತನಾಡಿ,
ಆಧುನಿಕ ರೋಗಗಳಾದ ರಕ್ತದೊತ್ತಡ, ಹೃದಯ ರೋಗ ಮತ್ತು ಸಕ್ಕರೆ ಕಾಯಿಲೆಗಳು ಇಂದು ಗ್ರಾಮೀಣ ಭಾಗದಲ್ಲೂ ಹೆಚ್ಚುತ್ತಿವೆ. ಆದ್ದರಿಂದ ಆರೋಗ್ಯದ ಬಗ್ಗೆ ಅರಿವು ಮೂಡಿಸುವ ಅವಶ್ಯಕತೆ ಇದೆ, ಇದರಿಂದ ಆರೋಗ್ಯ ವಂತ ಸಮಾಜ ನಿರ್ಮಾಣ ಸಾಧ್ಯ ಎಂದು ತಿಳಿಸಿದರು.