ಯು.ಬಿ.ಡಿ.ಟಿ. ಇಂಜಿನಿಯರಿಂಗ್ ಕಾಲೇಜು ಹಾಗೂ ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯದ ಘಟಕ ಕಾಲೇಜಿನಲ್ಲಿ ಇಂದು ಬೆಳಿಗ್ಗೆ 9ಕ್ಕೆ ಎತ್ನಿಕ್ ಡೇ ಉದ್ಘಾಟನಾ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ.
ಮುಖ್ಯ ಅತಿಥಿಗಳಾಗಿ ಹಾವೇರಿ ಜಿಲ್ಲಾ ಲೋಕಾಯುಕ್ತ ಉಪಾಧೀಕ್ಷಕ ಡಾ. ಬಿ.ಪಿ. ಚಂದ್ರಶೇಖರ್ ಅವರು ಭಾಗವಹಿಸುವರು. ತೀರ್ಪುಗಾರರಾಗಿ ಎಸ್. ಜಿ. ಮಲ್ಲೇಶ್ ಕುಮಾರ್, ಕನ್ನಡ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ರೂಪಾ ಮಂಜುನಾಥ, ವಾಣಿಜ್ಯೋದ್ಯಮಿ ಮತ್ತು ಮೀರಾ ರಘು ಪಾಲ್ಗೊಳ್ಳಲಿದ್ದು, ಪ್ರಾಂಶುಪಾಲ ಡಾ.ಡಿ.ಪಿ. ನಾಗರಾಜಪ್ಪ ಅಧ್ಯಕ್ಷತೆ ವಹಿಸಲಿದ್ದು, ಪ್ರಾಧ್ಯಾಪಕ ಡಾ.ಎಸ್. ಮಂಜಪ್ಪ, ಡಾ.ಎಸ್.ಬಿ. ಮಲ್ಲೂರ ಭಾಗವಹಿಸುವರು.