ಹರಪನಹಳ್ಳಿ, ಮೇ 23- ತಾಲ್ಲೂಕಿನ ಕಂಚಿಕೆರೆ ಗ್ರಾಮದಲ್ಲಿ ಈಚೆಗೆ ಶ್ರೀ ಕೋಡಿ ವೀರಭದ್ರೇಶ್ವರ ದೇವಸ್ಥಾನದ ಮೂರ್ತಿ ಪ್ರತಿಷ್ಠಾಪನೆ ಹಾಗೂ ಕಳಸಾರೋಹಣ ಕಾರ್ಯಕ್ರಮ ನಡೆಯಿತು.
ಆವರಗೊಳ್ಳ ಪುರವರ್ಗ ಹಿರೇಮಠದ ಓಂಕಾರ ಶಿವಾಚಾರ್ಯ ಶ್ರೀಗಳು ಮತ್ತು ಹನುಮಾವತಾರಿ ಬಸವರಾಜ ಗುರೂಜಿ ಅವರು ಪೂಜಾ ಕೈಂಕರ್ಯದಲ್ಲಿ ಪಾಲ್ಗೊಂಡು ಭಕ್ತರಿಗೆ ಆಶೀರ್ವದಿಸಿದರು.
ಇದೇ ವೇಳೆ ದೇವಸ್ಥಾನದ ಅಭಿವೃದ್ಧಿಗಾಗಿ ಸೇವೆ ಸಲ್ಲಿಸಿದ ಮುಖಂಡರಾದ ಬಾರಿಕರ ಮಂಜಣ್ಣ, ಕೆ.ಪಿ. ಬಸವರಾಜ್, ಡಿ. ಬಸವರಾಜ್, ಕೆಂಚನಗೌಡ, ಎಸ್. ಕೆಂಚಪ್ಪ, ಮೋತಿ ಸಿದ್ದಪ್ಪ, ಕೆ.ಬಿ. ಸುನೀಲ್ ಕುಮಾರ್, ಡಿ. ಕೊಟ್ರೇಶ್, ಫೋಟೋ ಲಿಂಗರಾಜ್, ಎಂ. ಅರುಣ್, ತಿಪ್ಪೇಸ್ವಾಮಿ ಅವರಿಗೆ ಸನ್ಮಾನಿಸಿ ಗೌರವಿಸಲಾಯಿತು.
ಸಂಗಪ್ಪ ತೋಟದ ಶಾಮನೂರು, ಪ್ರಕಾಶ ಹೊಸ ಮನಿ, ಮಹಾದೇಮ್ಮ ಮಲ್ಲಿಕಾರ್ಜುನಪ್ಪ, ಬಿ. ಮಂಜಮ್ಮ, ಬಿ. ಗೀತಾ, ಎಂ. ಉದಯಕುಮಾರ್, ಬಿ. ಸಂತೋಷ್ ಕುಮಾರ್, ಡಿ. ಶಿವಣ್ಣ, ಬಿ. ಉಮೇಶ್ ಹಾಗೂ ಕಂಚಿಕೆರೆಯ ಮುಖಂಡರು ಹಾಗೂ ಸುತ್ತಮುತ್ತಲಿನ ಗ್ರಾಮಸ್ಥರಿದ್ದರು.