ಹರಿಹರ, ಮೇ 23 – ಕುಮಾರಪಟ್ಟಣಂ ಕೋಡಿಯಾಲ ಹೊಸಪೇಟೆ ಗ್ರಾಮದ ಆಂಜನೇಯ ಸ್ವಾಮಿ ದೇವಸ್ಥಾನದ ಹಿಂಬದಿಯ ತುಂಗಭದ್ರಾ ನದಿಯ ದಂಡೆಯ ಮೇಲೆ ಶ್ರೀ ದುರ್ಗಾದೇವಿ ಮತ್ತು ನಾಗಬನ ದೇವರ ಮೂರ್ತಿಯನ್ನು ಪ್ರತಿಷ್ಠಾಪಿಸಿ, ಇಂದು ವಿಶೇಷ ಪೂಜಾ ಕಾರ್ಯ ನೆರವೇರಿಸಲಾಯಿತು.
ಮಂಗಳೂರಿನ ಪ್ರಸಿದ್ಧ ಅರ್ಚಕರ ತಂಡದವರಿಂದ, ಆಧ್ಯಗಣ ಯಾಗ, ಪಂಚ ಕಲಶ, ಪ್ರಧನ ಯಾಗ, ಚಂಡಿಕಾ ಹೋಮ- ಹವನ, ಮಹಾಮಂಗಳಾರತಿ, ಪ್ರಸಾದ ವಿನಿಯೋಗ, ಸಂಜೆ ನಾಗದೇವತೆಯ ಅಶ್ಲೇಷ ಪೂಜೆ ಕಾರ್ಯಗಳು
ಶ್ರೀ ಮಂಜುನಾಥ್ ಕರೆಡಪ್ಪನವರ್ ಗುರೂಜಿ ನೇತೃತ್ವದಲ್ಲಿ ನಡೆಯಿತು.
ದುಂಡಿ ಬಸವೇಶ್ವರ ದೇವಸ್ಥಾನದ ಆವರಣದಿಂದ ದುರ್ಗಾ ದೇವಿಯ ನೂತನ ಬಿಂಬ ಉತ್ಸವ ಜರುಗಿತು.
ಈ ಸಂದರ್ಭದಲ್ಲಿ ಶ್ರೀ ಮಠದ ಧರ್ಮದರ್ಶಿ ಮಂಜುನಾಥ್ ಕರಡೆಪ್ಪನವರ್, ಪಾರ್ವತಮ್ಮ, ಇಂದೂಧರ ಸ್ವಾಮಿ, ವೀರೇಶ್ ಅಜ್ಜಣ್ಣನವರ್, ಕರಿಬಸಪ್ಪ ಕಂಚಿಕೇರಿ, ಮಹೇಶ್ ಬನ್ನಿ ಕೋಡು, ರುದ್ರೇಶ್ ತಿಪ್ಪಣ್ಣನವರ್, ಆಶಾ ಕುಂಠೆ, ಕವಿತಾ, ಮಂಜುಳಾ ಇತರರು ಹಾಜರಿದ್ದರು.