ಮಾದಕ ವಸ್ತು ಮಾರಾಟ: 4.5 ಲಕ್ಷ ಮೌಲ್ಯದ ಮಾದಕ ವಸ್ತುಗಳು ವಶ, ಬಂಧನ

ಮಾದಕ ವಸ್ತು ಮಾರಾಟ: 4.5 ಲಕ್ಷ ಮೌಲ್ಯದ ಮಾದಕ ವಸ್ತುಗಳು ವಶ, ಬಂಧನ

 ದಾವಣಗೆರೆ, ಮೇ 22- ನಗರದ ಬಿ.ಟಿ. ಲೇಔಟ್‌ನ 4ನೇ ಕ್ರಾಸ್‌ನಲ್ಲಿರುವ ಪಾರ್ಕ್‌ ಬಳಿ ಮಾದಕ ವಸ್ತು ಮಾರಾಟ ಮಾಡುತ್ತಿದ್ದ ಆರೋಪಿಯನ್ನು ಬಂಧಿಸಿರುವ ಪೊಲೀಸರು ಆತನಿಂದ 4.5 ಲಕ್ಷ ರೂ. ಮೌಲ್ಯದ 65 ಗ್ರಾಂ ವಿವಿಧ ಬಗೆಯ ಮಾದಕ ವಸ್ತುಗಳನ್ನು ವಶಪಡಿಸಿಕೊಂಡಿದ್ದಾರೆ.

ರಾಜಸ್ಥಾನದ ಹಾಲಿವ್ ಗ್ರಾಮದ ಅಶೋಕ್ (24) ಬಂಧಿತನಾಗಿದ್ದು, ಈತ ಬೆಂಗಳೂರು ರಾಮದಾಸ್ ಲೇ ಔಟ್‌ನಲ್ಲಿ ಸ್ಟೀಲ್ ರೇಲಿಂಗ್ ಕೆಲಸ ಮಾಡುತ್ತಿದ್ದ ಎನ್ನಲಾಗಿದೆ.

ಆಜಾದ್ ನಗರದಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸ್ ನಿರೀಕ್ಷಕ ಅಶ್ವಿನ್ ಕುಮಾರ್, ಪಿಎಸ್‍ಐ ಇಮ್ತಿಯಾಜ್, ಸಿಬ್ಬಂದಿಯವರಾದ ಡಿಸಿಆರ್‍ಬಿ ವಿಭಾಗದ ಮಜೀದ್, ರಮೇಶ್ ನಾಯ್ಕ್, ಕೆ.ಟಿ. ಆಂಜನೇಯ, ಬಾಲರಾಜ್, ಮಾಲತೇಶ್ ಕೆಳಗಿನಮನೆ, ಕೃಷ್ಣ ನಂದ್ಯಾಲ, ತಿಪ್ಪೇಸ್ವಾಮಿ, ನಾಗರಾಜ ಡಿ.ಬಿ ಆರೋಪಿ ಬಂಧಿಸುವಲ್ಲಿ ಶ್ರಮಿಸಿದ್ದಾರೆ.

error: Content is protected !!