ಶ್ರೀಶೈಲ ಕ್ರೆಡಿಟ್ ಸೊಸೈಟಿಯ ನೂತನ ಸ್ವಂತ ಕಟ್ಟಡದ ಉದ್ಘಾಟನೆ

ಶ್ರೀಶೈಲ ಕ್ರೆಡಿಟ್ ಸೊಸೈಟಿಯ ನೂತನ ಸ್ವಂತ ಕಟ್ಟಡದ ಉದ್ಘಾಟನೆ

ದಾವಣಗೆರೆ, ಮೇ 21 – ಜಿಲ್ಲೆಯ ಪ್ರತಿಷ್ಠಿತ ಕ್ರೆಡಿಟ್ ಕೋ – ಆಪರೇಟಿವ್ ಸೊಸೈಟಿಗಳಲ್ಲೊಂದಾದ ಶ್ರೀ ಶ್ರೀಶೈಲ ಕ್ರೆಡಿಟ್ ಕೋ-ಆಪರೇಟಿವ್ ಸೊಸೈಟಿಯು ಇದೀಗ ಸ್ವಂತ ಕಟ್ಟಡ ಹೊಂದಿದೆ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ.

ನಗರದ ಹದಡಿ ರಸ್ತೆಯ ವಿದ್ಯಾರ್ಥಿ ಭವನದ ಕೂಗಳತೆಯಲ್ಲಿದ್ದ ಶ್ರೀ ಶ್ರೀಶೈಲ ಸೊಸೈಟಿಯ ಪ್ರಧಾನ ಕಛೇರಿಯನ್ನು, ಕಛೇರಿ ಸಮೀಪದಲ್ಲಿರುವ ಕೆಟಿಜೆ ನಗರ 3ನೇ ಮುಖ್ಯ ರಸ್ತೆ, 16ನೇ ತಿರುವಿನಲ್ಲಿ ನೂತನವಾಗಿ ನಿ ರ್ಮಿಸಿರುವ ಸಂಘದ ಸ್ವಂತ ಕಟ್ಟಡಕ್ಕೆ ಸ್ಥಳಾಂತರಿಸಲಾಗಿದೆ.

ಗ್ರಾಹಕರ ಮೂಲಭೂತ ಸೌಲಭ್ಯಗಳೊಂದಿಗೆ ಅತ್ಯಾಧುನಿಕವಾಗಿ ಶ್ರೀಶೈಲ ಕ್ರೆಡಿಟ್ ಸೊಸೈಟಿ ಪ್ರಧಾನ ಕಛೇರಿಯ ಕಟ್ಟಡವನ್ನು ನಿರ್ಮಿಸಲಾಗಿದ್ದು, ಕಳೆದ ವಾರ ನಡೆದ ಸರಳ ಸಮಾರಂಭದಲ್ಲಿ ನೂತನ ಕಟ್ಟಡವನ್ನು ಸಾರ್ವಜನಿಕರ ಸೇವೆಗೆ ಸಮರ್ಪಿಸಲಾಯಿತು.

ಸುಮಾರು ಎರಡು ಕೋಟಿ ರೂ.ಗಳ ವೆಚ್ಚದಲ್ಲಿ ನಿರ್ಮಾಣಗೊಂಡಿರುವ ಈ ಕಟ್ಟಡದಲ್ಲಿ ಗ್ರಾಹಕರು, ಸದಸ್ಯರು ಕುಳಿತುಕೊಳ್ಳಲು ವಿಶಾಲ ಆಸನಗಳು, ಹವಾನಿಯಂತ್ರಿತ ಕೊಠಡಿ-ಕೌಂಟರ್‌ಗಳು, ಆಡಳಿತ ಮಂಡಳಿ ಸಭೆಗಾಗಿ ವಿಶಾಲವಾದ ಹಾಲ್, ವಿಶಾಲವಾದ ವಿವಿಧ ಅಳತೆಗಳ ಲಾಕರ್‌ಗಳನ್ನು ಅಳವಡಿಸಲಾಗಿದೆ.

ಉದ್ಘಾಟನೆ : ಪ್ರಥಮ ದರ್ಜೆ ಗುತ್ತಿಗೆದಾರರೂ ಆಗಿರುವ ಶ್ರೀ ಶೈಲ ಕ್ರೆಡಿಟ್ ಕೋ-ಆಪರೇಟಿವ್ ಸೊಸೈಟಿಯ ಅಧ್ಯಕ್ಷ ಆರ್. ವೆಂಕಟರೆಡ್ಡಿ ಅವರು, ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದ ಸಂಘದ ಸದಸ್ಯರು, ಗ್ರಾಹಕರು, ಹಿತೈಷಿಗಳು, ಗಣ್ಯರು ಮತ್ತು ಸಿಬ್ಬಂದಿ ವರ್ಗದವರ ಚಪ್ಪಾಳೆಗಳ ಮಧ್ಯೆ ಟೇಪು ಕತ್ತರಿಸಿರುವುದರ ಮೂಲಕ ನೂತನ ಕಟ್ಟಡವನ್ನು ಉದ್ಘಾಟಿಸಿದರು.

ಆಡಳಿತ ಮಂಡಳಿ ಸಭೆಯ ಹಾಲ್ ಅನ್ನು ವರ್ತಕರೂ ಆಗಿರುವ ಸಂಘದ ಉಪಾಧ್ಯಕ್ಷ ವಿ. ಪ್ರಕಾಶ್ ಮತ್ತು ಇತರೆ ವಿವಿಧ ವಿಭಾಗಗಳನ್ನು ಆಡಳಿತ ಮಂಡಳಿಯ ಹಿರಿಯ ಸದಸ್ಯರುಗಳು ಉದ್ಘಾಟಿಸುವುದರೊಂದಿಗೆ ನಾಗರಿಕರ ಸೇವೆಗೆ ಸಮರ್ಪಣೆ ಮಾಡಿದರು.

ಈ ಸಂದರ್ಭದಲ್ಲಿ ಔಪಚಾರಿಕವಾಗಿ ಮಾತನಾಡಿದ ಸಂಘದ ಅಧ್ಯಕ್ಷ ವೆಂಕಟರೆಡ್ಡಿ, ಸಂಘದ ಸದಸ್ಯರು ಮತ್ತು ಗ್ರಾಹಕರು ಹಾಗೂ ಹಿತೈಷಿಗಳು ನೀಡುತ್ತಿರುವ ನಿರಂತರ ಪ್ರೋತ್ಸಾಹ ದಿಂದಾಗಿ ಶ್ರೀಶೈಲ ಸೊಸೈಟಿಯು ಇಂದು ಸ್ವಂತ ಕಟ್ಟಡ ಹೊಂದಲು ಸಾಧ್ಯವಾಯಿತು ಎಂದು ಹರ್ಷ ವ್ಯಕ್ತಪಡಿಸಿದರು.

ಸಂಘದ ಉಪಾಧ್ಯಕ್ಷ ಪ್ರಕಾಶ್ ಮಾತನಾಡಿ, ಸಂಘದ ಸದಸ್ಯರು – ಗ್ರಾಹಕರ ಸಹಕಾರ, ಹಿತೈಷಿಗಳು- ಗಣ್ಯರು ಕೊಡುತ್ತಿರುವ ಪ್ರೋತ್ಸಾಹ, ಆಡಳಿತ ಮಂಡಳಿ ಸದಸ್ಯರ ಶ್ರಮ, ಸಿಬ್ಬಂದಿ ವರ್ಗದವರ ಕ್ರಿಯಾಶೀಲತೆ ಮತ್ತು ದಕ್ಷತೆಯಿಂದಾಗಿ ಈ ಸಂಘ ಲಾಭ ದಾಯಕದಲ್ಲಿ ಮುನ್ನಡೆದು ಸ್ವಂತ ಕಟ್ಟಡ ಹೊಂದಿದೆ ಎಂದು ಎಲ್ಲರನ್ನೂ ಸ್ಮರಿಸಿ ಕೃತಜ್ಞತೆ ಸಲ್ಲಿಸಿದರು.

ಇದೇ ಸಂದರ್ಭದಲ್ಲಿ ಸಂಘದ ನಿರ್ದೇಶಕರಾಗಿ ಸೇವೆ ಸಲ್ಲಿಸಿ ನಿವೃತ್ತರಾದ ಹಿರಿಯರು, ಆಡಳಿತ ಮಂಡಳಿ ಸದಸ್ಯರು, ಸಿಬ್ಬಂದಿ ವರ್ಗದವರನ್ನು ಸನ್ಮಾನಿಸಿ, ಗೌರವಿಸು ವುದರೊಂದಿಗೆ ಪ್ರತಿಯೊಬ್ಬರ ಸೇವೆ ಮತ್ತು ಕಾರ್ಯ ನಿರ್ವಹಣೆಯನ್ನು ಮುಕ್ತ ಕಂಠದಿಂದ ಪ್ರಶಂಸಿಸಲಾಯಿತು.

ಸಂಘದ ನಿರ್ದೇಶಕರುಗಳಾದ ಟಿ.ಹೆಚ್. ರಾಜಶೇಖರ್, ಮೇಕಾ ಮುರುಳಿಕೃಷ್ಣ, ಕೆ.ಬಿ. ನಾಗ ರಾಜ್, ನಾಗೇಂದ್ರ ಎನ್. ಲದ್ವಾ, ಶ್ರೀಮತಿ ಎ. ಶ್ರೀದೇವಿ ತಿಮ್ಮಾರೆಡ್ಡಿ, ಕೆ. ನಾರಾಯಣ, ಬಿಜ್ಜಂ ವೆಂಕಟೇಶ್ವರ ರೆಡ್ಡಿ, ಬಿ. ಯೋಗಿ ರೆಡ್ಡಿ, ಬಿ. ವೆಂಕಟೇ ಶ್ವರ ರೆಡ್ಡಿ, ಜಿ.ಆರ್. ರಾಜಾನಾಯ್ಕ, ಶ್ರೀಮತಿ ವೈ. ಸರೋಜ ವೆಂಕಟೇಶ್ವರ ರೆಡ್ಡಿ ಉಪಸ್ಥಿತರಿದ್ದರು. ಸಂಘದ ಮುಖ್ಯ ಕಾರ್ಯನಿರ್ವಾಹಕ ರಾಮ ನಾರಾಯಣ ರೆಡ್ಡಿ  ಅವರಿಂದ ಸ್ವಾಗತ, ವ್ಯವಸ್ಥಾಪಕ ಕೆ. ರಾಘವೇಂದ್ರ ರಾವ್ ಅವರಿಂದ ವಂದನಾರ್ಪಣೆ, ಹಿರಿಯ ನಿರ್ದೇಶಕ ಕೆ.ಬಿ. ನಾಗರಾಜ್ ಅವರಿಂದ ಕಾರ್ಯಕ್ರಮ ನಿರೂಪಣೆ ನಡೆಯಿತು.

error: Content is protected !!