ತೋಟಗಳಿಗೆ ಜೀವಕಳೆ ತಂದ ಮುಂಗಾರು ಪೂರ್ವ ಮಳೆ

ತೋಟಗಳಿಗೆ ಜೀವಕಳೆ ತಂದ ಮುಂಗಾರು ಪೂರ್ವ ಮಳೆ

ಮಲೇಬೆನ್ನೂರು, ಮೇ 21 –  ಬರಗಾಲ ಎದುರಿಸುತ್ತಿದ್ದ ಸಕಲ ಜೀವರಾಶಿಗಳಿಗೂ ಕಳೆದ 3-4 ದಿನಗಳಿಂದ ಸುರಿದ ಮುಂಗಾರು ಪೂರ್ವ ಮಳೆ ಭರವಸೆ ಮೂಡಿಸಿದ್ದು, ಎಲ್ಲೆಡೆ ತಂಪು ವಾತಾವರಣ ನಿರ್ಮಾಣ ವಾಗಿದೆ. ಹಳ್ಳಗಳಲ್ಲಿ ಸ್ವಲ್ಪ ಮಟ್ಟಿಗೆ ನೀರು ಹರಿಯುತ್ತಿದ್ದು, ಬಿಸಿಲಿನ ಬೇಗೆಯಿಂದ ತತ್ತರಿಸಿದ್ದ ತೋಟಗಳಿಗೆ ಈ ಮಳೆ ಜೀವಕಳೆ ತಂದಿದೆ. 

ಮಲೇಬೆನ್ನೂರು ಪಟ್ಟಣದ ಆಶ್ರಯ ಕಾಲೋನಿ ಸಮೀಪದ ಗುಡ್ಡ ಗಾಡು ಪ್ರದೇಶದಲ್ಲಿ ಬಿದ್ದಿರುವ ಮಳೆ ರೈತರ ಕೃಷಿ ಚಟುವಟಕೆಗಳಿಗೆ ಆಶಾ ಭಾವನೆ ಮೂಡಿಸಿದೆ. ಕೊಮಾರನಹಳ್ಳಿ ಸಮೀಪದ ಗುಡ್ಡಗಾಡು ಪ್ರದೇಶದಲ್ಲಿ ಸೋಮವಾರ ರಾತ್ರಿ ಮತ್ತು ಮಂಗಳವಾರ ಮಧ್ಯಾಹ್ನ ಸುರಿದ ಮಳೆಯಿಂದಾಗಿ ಹಾಲವರ್ತಿ ಹಳ್ಳದ ಹಾಗೂ ಮಿಂಚುಳ್ಳಿ ಜಲಪಾತದಲ್ಲಿ ನೀರಿನ ಹರಿವು ಹೆಚ್ಚಾಗಿತ್ತು. ಜಿಗಳಿ-ಕುಂಬಳೂರು ನಡುವೆ ಇರುವ ಹಳ್ಳದಲ್ಲಿ ನೀರು ಹರಿಯಿತು. ಆದರೆ ಬ್ಯಾಲದ ಹಳ್ಳಿ ಹಳ್ಳ ಮಾತ್ರ ಬತ್ತಿ ಬರಿದಾಗಿದೆ.

error: Content is protected !!