ಒಂದೇ ಕುಟುಂಬದ ಮೂವರು ನಾಪತ್ತೆ

ಒಂದೇ ಕುಟುಂಬದ ಮೂವರು ನಾಪತ್ತೆ

ದಾವಣಗೆರೆ, ಮೇ 20- ಇಲ್ಲಿನ ವಿನೋಬ ನಗರದ 1ನೇ ಮೇನ್ 7ನೇ ಕ್ರಾಸ್‌ನಲ್ಲಿ ವಾಸವಾಗಿದ್ದ ಒಂದೇ ಕುಟುಂಬದ ಮೂವರು ಕಾಣೆಯಾಗಿದ್ದಾರೆ.  ಈ ಸಂಬಂಧ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಅಂಜನ್‌ಬಾಬು ಎಂಬಾತ ತನ್ನ ಹೆಂಡತಿ ನಾಗವೇಣಿ ಮತ್ತು ಒಂದು ವರ್ಷದ ನಕ್ಷತ್ರ ಎಂಬ ಮಗುವಿನೊಂದಿಗೆ ಕಳೆದ ಏಪ್ರಿಲ್ 12ರಂದು ಮನೆಯಿಂದ ಹೋದವರು ಇದುವರೆಗೂ ವಾಪಸ್‌ ಬಂದಿರುವುದಿಲ್ಲ. ಅಂಜನ್ ಬಾಬು ಕನ್ನಡ, ಹಿಂದಿ ಮತ್ತು ಇಂಗ್ಲಿಷ್ ಭಾಷೆ  ಮಾತನಾಡುತ್ತಾರೆ.   ಇವರ ಬಗ್ಗೆ ಮಾಹಿತಿ ದೊರಕಿದಲ್ಲಿ ಪಿ.ಜೆ ಬಡಾವಣೆ ಪೆೊಲೀಸ್ ಠಾಣೆ ದೂ.ಸಂ: 08192-272012, 259213, 253400, 253100 ಗೆ ಕರೆ ಮಾಡಲು ಠಾಣಾಧಿಕಾರಿ ತಿಳಿಸಿದ್ದಾರೆ.

error: Content is protected !!