ದಾವಣಗೆರೆ, ಮೇ 19 – ನಗರದ ಜೈನ್ ತಾಂತ್ರಿಕ ಮಹಾವಿದ್ಯಾಲಯದಲ್ಲಿ ವಾರ್ಷಿಕ ಕ್ರೀಡೆ ಮತ್ತು ಸಾಂಸ್ಕೃತಿಕ ಕಾರ್ಯಕ್ರಮವಾದ ಶೃಂಗ ಸಮಾರಂಭ ಚಾಲನೆಗೊಂಡಿತು. ಚಿತ್ರ ನಟ ಪೃಥ್ವಿ ಶಾಮನೂರು ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಸಮಾರಂಭದ ಸಂಚಾಲಕ ಡಾ. ಮೌನೇಶಚಾರ್ ಎಸ್, ಶೃಂಗ ಕ್ರೀಡೆ ಹಾಗೂ ಸಾಂಸ್ಕೃತಿಕ ಸ್ಪರ್ಧೆಗಳ ಜಾಲತಾಣದ ಬಗ್ಗೆ ವಿವರಣೆ ನೀಡಿದರು. ಸಲಹೆಗಾರ ಡಾ. ಮಂಜಪ್ಪ ಸಾರಥಿ ಹಾಗೂ ಪ್ರಾಂಶುಪಾಲ ಡಾ. ಗಣೇಶ್ ಡಿ.ಬಿ. ವಿದ್ಯಾರ್ಥಿ ಗಳನ್ನು ಉದ್ದೇಶಿಸಿ, ಸ್ಪರ್ಧಾ ಮನೋಭಾವನೆಯಿಂದ ಪಾಲ್ಗೊಳ್ಳಲು ಕರೆ ನೀಡಿದರು. ಕಾಲೇಜಿನ ಸಾಂಸ್ಕೃತಿಕ ಸಂಯೋಜಕ ಮುರಳಿಧರ್ ಎಸ್. ಪ್ರಾರ್ಥಿಸಿದರು.
January 8, 2025