ವಿದ್ಯಾರ್ಥಿಗಳು ಪುಸ್ತಕಗಳನ್ನು ಓದುವ ಹವ್ಯಾಸ ಬೆಳೆಸಿಕೊಳ್ಳಬೇಕು

ವಿದ್ಯಾರ್ಥಿಗಳು ಪುಸ್ತಕಗಳನ್ನು  ಓದುವ ಹವ್ಯಾಸ ಬೆಳೆಸಿಕೊಳ್ಳಬೇಕು

ದಾವಣಗೆರೆ, ಮೇ 17 – ಒಂದು ಒಳ್ಳೆಯ ಪುಸ್ತಕವು ನೂರು ಸ್ನೇಹಿತರ ಮೌಲ್ಯದ್ದಾಗಿದೆ. ನಮ್ಮ ಜೀವನದಲ್ಲಿ ಪುಸ್ತಕಗಳು ನಮ್ಮ ಗುರಿಗಳನ್ನು ಸಾಧಿಸಲು, ಸರಿಯಾದ ಹಾದಿಯಲ್ಲಿ ನಡೆಸಲು ಸಹಕಾರಿಯಾಗುತ್ತವೆ. ಇಂದಿನ ಆಧುನಿಕ ಜಗತ್ತಿನಲ್ಲಿ ವಿದ್ಯಾರ್ಥಿಗಳು ಪುಸ್ತಕ ಓದುವ ಹವ್ಯಾಸ ಬೆಳೆಸಿಕೊಳ್ಳಬೇಕು. ಕಲಿಕೆಯು ಆಜೀವ ಪ್ರಕ್ರಿಯೆಯಾಗಿದ್ದು, ನಮ್ಮ ಒಂಟಿತನ ಪ್ರಪಂಚದಿಂದ ಹೊರಬರಲು ಪುಸ್ತಕಗಳು ಸಹಕಾರಿ. ಪ್ರತಿಯೊಬ್ಬ ವಿದ್ಯಾರ್ಥಿಯು ಪುಸ್ತಕಗಳನ್ನು ಓದುವ ಕ್ರಮ ಬೆಳೆಸಿಕೊಂಡರೆ ಹೆಚ್ಚು ಜ್ಞಾನ ಸಂಪಾದನೆ ಸಾಧಿಸಲು ಸಾಧ್ಯ ಎಂದು ಎ.ಆರ್.ಜಿ ಕಲಾ ಮತ್ತು ವಾಣಿಜ್ಯ ಕಾಲೇಜಿನ ಪ್ರಾಂಶುಪಾಲ ಡಾ. ಜಿ.ಬಿ. ಬೋರಯ್ಯ ಅವರು ಕಾಲೇಜಿನಲ್ಲಿ ಗ್ರಂಥಾಲಯ ಮತ್ತು ಮಾಹಿತಿ ವಿಭಾಗವು ಹಮ್ಮಿಕೊಂಡಿದ್ದ ವಿಶ್ವ ಪುಸ್ತಕ ದಿನಾಚರಣೆ ಉದ್ಘಾಟಿಸಿ ಮಾತನಾಡಿದರು.

 ಸಮಾರಂಭದಲ್ಲಿ ಎ.ಆರ್.ಜಿ ಪದವಿಪೂರ್ವ ಕಾಲೇಜಿನ ಕೆ. ಬೊಮ್ಮಣ್ಣ, ಗ್ರಂಥಾಲಯ ವಿಭಾಗದ ಮುಖ್ಯಸ್ಥ ಡಾ. ಚಮನ್ ಸಾಬ್, ವಾಣಿಜ್ಯಶಾಸ್ತ್ರ ವಿಭಾಗದ ಮುಖ್ಯಸ್ಥ ಪ್ರೊ. ಅನಿತಾಕುಮಾರಿ, ಕನ್ನಡ ವಿಭಾಗದ ಮುಖ್ಯಸ್ಥ ಡಾ. ಹೆಚ್.ಆರ್. ತಿಪ್ಪೇಸ್ವಾಮಿ, ಐಕ್ಯೂಎಸಿ ಸಂಚಾಲಕರಾದ ಪ್ರೊ. ರಶ್ಮಿ, ವಿಶ್ರಾಂತ ಪ್ರಾಧ್ಯಾಪಕ ಪ್ರೊ. ತಿಪ್ಪಾರೆಡ್ಡಿ, ಕಛೇರಿ ಅಧೀಕ್ಷಕ ಜಿ.ಆರ್. ಕರಿಬಸಪ್ಪ, ಅನುಸೂಯಮ್ಮ, ಸಚಿನ್ ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.

error: Content is protected !!