ದಾವಣಗೆರೆ, ಮೇ 17- ಹುಬ್ಬಳ್ಳಿ-ಧಾರವಾಡ ರಸ್ತೆಯಲ್ಲಿರುವ ದೈವಜ್ಞ ಸಮುದಾಯ ಭವನದಲ್ಲಿ ಅಖಿಲ ಕರ್ನಾಟಕ ದೈವಜ್ಞ ಬ್ರಾಹ್ಮಣ ಸಂಘ (ಧಾರವಾಡ) ಇವರ ವತಿಯಿಂದ ನಾಡಿದ್ದು ದಿನಾಂಕ 19ರ ಭಾನುವಾರ ಸರ್ವ ಸಾಧಾರಣ ಸಭೆ (ಜಿಬಿ)ಯನ್ನು ಏರ್ಪಡಿಸಲಾಗಿದೆ.
ಸಭೆಯಲ್ಲಿ ಸಂಘದ ಆಜೀವ ಸದಸ್ಯತ್ವ ಹೊಂದಿದ ಸದಸ್ಯರು ಹಾಗೂ ನೂತನ ಸದಸ್ಯತ್ವಕ್ಕೆ ಹಣ ತುಂಬಿದವರು ಹಾಜರಿರಲು ದಾವಣಗೆರೆ ದೈವಜ್ಞ ಸಮಾಜದ ಅಧ್ಯಕ್ಷ ಪ್ರಶಾಂತ್ ವಿ. ವೆರ್ಣೇಕರ್ ಕೋರಿದ್ದಾರೆ.