ಹೊಳೆಸಿರಿಗೆರೆ : ಉತ್ತಮ ಮಳೆಗಾಗಿ ಕತ್ತೆ ಮದುವೆ

ಹೊಳೆಸಿರಿಗೆರೆ : ಉತ್ತಮ ಮಳೆಗಾಗಿ ಕತ್ತೆ ಮದುವೆ

ಮಲೇಬೆನ್ನೂರು, ಮೇ 17- ಸಮೀಪದ ಹೊಳೆಸಿರಿಗೆರೆ ಗ್ರಾಮದಲ್ಲಿ ಉತ್ತಮ ಮಳೆ ಆಗುವಂತೆ ವರುಣ ದೇವನಿಗೆ ಪ್ರಾರ್ಥಿಸಿ, ಕತ್ತೆಗಳಿಗೆ ಮದುವೆ ಮಾಡಿಸಿದ್ದಾರೆ.

ಮುಂಗಾರು ಮಳೆಯ ಸಿಂಚನ ಎಲ್ಲೆಡೆ ಆಗುತ್ತಿದ್ದು, ಹೊಳೆಸಿರಿಗೆರೆ ಗ್ರಾಮದಲ್ಲಿ ಇದುವರೆಗೂ ಕೃಷಿ ಚಟುವಟಿಕೆಗೆ ಯೋಗ್ಯವಾದ ಮಳೆ ಬಂದಿಲ್ಲ ಎಂದು ಗ್ರಾಮಸ್ಥರು ತಿಳಿಸಿದರು.

ಕತ್ತೆ ಮದುವೆ ಮಾಡಿದ್ರೆ ಮಳೆ ಬರಲಿದೆ ಎಂಬ ನಂಬಿಕೆಯಿಂದ ಕತ್ತೆಗಳ ಮದುವೆ ಮಾಡಿಸಿದ್ದೇವೆ ಎಂದು ಗ್ರಾಮ ಪಂಚಾಯಿತಿ ಮಾಜಿ ಸದಸ್ಯ ಹಾಲೇಶ್ ಕಣೇಕಲ್ ಹೇಳಿದರು.

ಮದುಮಕ್ಕಳಂತೆ ಕತ್ತೆಗಳನ್ನು ಸಿಂಗಾ ರಗೊಳಿಸಿ, ಶ್ರೀ ಯೋಗಿ ನಾರೇಯಣ ದೇವಸ್ಥಾನದಲ್ಲಿ ಶಾಸ್ತ್ರೋಕ್ತವಾಗಿ ಮದುವೆ ಮಾಡಿಸಿದರು. ಬಾಸಿಂಗ ಹಾಗೂ ಕೊರಳಿಗೆ ಹೂಮಾಲೆ ಹಾಕಿದ ಕತ್ತೆಗಳಿಗೆ ಗ್ರಾಮದ ಪ್ರಮುಖ ಬೀದಿಯಲ್ಲಿ ಮೆರವಣಿಗೆ ಮಾಡಿದರು. ಗ್ರಾಮಸ್ಥರು ಎಲ್ಲಾ ದೇಗುಲಗಳಿಗೆ ಪೂಜೆ ಸಲ್ಲಿಸಿ, ಉತ್ತಮ ಮಳೆ, ಬೆಳೆಗಾಗಿ ಪ್ರಾರ್ಥಿಸಿದರು.

ಈ ವೇಳೆ ಗ್ರಾ.ಪಂ. ಸದಸ್ಯ ಬಂಡೇರ ಪ್ರಭು, ಕುಂದೂರು ಶಂಕ್ರಣ್ಣ, ಮಲ್ಲಾಡ್ರ ಪ್ರಭು, ಮಾಳಗಿ ಪ್ರಕಾಶ್, ಎಂ.ಜಿ. ರಾಜಣ್ಣ, ಬ್ಯಾಲದಹಳ್ಳಿ ಶಿವಕುಮಾರ ಮತ್ತಿತರರಿದ್ದರು.

error: Content is protected !!