ವಿಕಲಚೇತನರ ಮಕ್ಕಳಿಗೆ 6ನೇ ತರಗತಿ ಪ್ರವೇಶಕ್ಕೆ ಅವಕಾಶ

ದಾವಣಗೆರೆ, ಮೇ 16 – ಕರ್ನಾಟಕ ವಸತಿ ಶಿಕ್ಷಣ ಸಂಸ್ಥೆಗಳ ಸಂಘದ ಅಧೀನದಲ್ಲಿ ಕಾರ್ಯ ನಿರ್ವಹಿಸು ತ್ತಿರುವ 826 ಮೊರಾರ್ಜಿ ದೇಸಾಯಿ, ಕಿತ್ತೂರು ರಾಣಿ ಚೆನ್ನಮ್ಮ, ಡಾ.ಬಿ.ಅರ್.ಅಂಬೇಡ್ಕರ್, ಅಟಲ್ ಬಿಹಾರಿ ವಾಜಪೇಯಿ, ಶ್ರೀಮತಿ ಇಂದಿರಾ ಗಾಂಧಿ, ಏಕಲವ್ಯ ಮಾದರಿ ವಸತಿ ಶಾಲೆ, ಕಾಲೇಜು ಗಳ ಪೈಕಿ 807 ವಸತಿ ಶಾಲೆಗಳಲ್ಲಿ ಶೇ.25ಕ್ಕಿಂತ ಹೆಚ್ಚಿನ ಅಂಗವಿಕಲತೆ ಹೊಂದಿರುವ ಮಕ್ಕಳು, ಹೆಚ್.ಐ.ವಿಗೆ ತುತ್ತಾದ ಪೋಷಕರ ಮಕ್ಕಳು, ಒಬ್ಬ ಪೋಷಕರನ್ನು ಮಾತ್ರ ಹೊಂದಿರುವ ಅಥವಾ ಅನಾಥ ಮಕ್ಕಳಿಗೆ ಶೇ.10 ಮೀಸಲಾತಿ ಯನ್ನು ನಿಗದಿಪಡಿಸಿ 6ನೇ ತರಗತಿ ಪ್ರವೇಶ ಪಡೆಯಬಹುದು. 

ಹೆಚ್ಚಿನ ಮಾಹಿತಿಗಾಗಿ  ಸಂಬಂಧಪಟ್ಟ ವಸತಿ ನಿಲಯಗಳ ಮೇಲ್ವಿಚಾರ ಕರನ್ನು ಸಂಪರ್ಕಿಸಬೇಕೆಂದು ಜಿಲ್ಲಾ ವಿಕಲಚೇತ ನರ ಹಾಗೂ ಹಿರಿಯ ನಾಗರಿಕರ ಸಬಲೀ ಕರಣಾಧಿಕಾರಿ ಡಾ. ಕೆ.ಕೆ. ಪ್ರಕಾಶ್ ತಿಳಿಸಿದ್ದಾರೆ.

error: Content is protected !!