ವಿದ್ಯಾರ್ಥಿಗಳಿಗೆ ಸ್ವಯಂ ಪ್ರೇರಣೆ ಕೌಶಲ್ಯ ಮುಖ್ಯ

ವಿದ್ಯಾರ್ಥಿಗಳಿಗೆ ಸ್ವಯಂ ಪ್ರೇರಣೆ ಕೌಶಲ್ಯ ಮುಖ್ಯ

ದಾವಣಗೆರೆ, ಮೇ 16- ವಿದ್ಯಾರ್ಥಿಗಳು ತಮ್ಮ ಕಲಿಕೆಯಲ್ಲಿ ಸ್ವಯಂ ಪ್ರೇರಣೆ, ಸಮಯ ನಿರ್ವಹಣೆ ಮತ್ತು ನಿರ್ಣಾಯಕ  ಕೌಶಲ್ಯ ಅಭಿವೃದ್ಧಿ ಪಡಿಸಿಕೊಳ್ಳುವಂತೆ ಬೋಶ್ ಇಂಡಿಯಾ ಫೌಂಡೇಶನ್‌ನ ಡಾ.ಓ.ಪಿ ಗೋಯಲ್ ಸಲಹೆ ನೀಡಿದರು.

ನಗರದ ಜಿ.ಎಂ ವಿಶ್ವವಿದ್ಯಾಲಯದ ಎಂಬಿಎ ವಿಭಾಗದಲ್ಲಿ ಇತ್ತೀಚೆಗೆ ನಡೆದ 3ದಿನಗಳ ಅಂತರರಾಷ್ಟ್ರೀಯ ವಿಚಾರ ಸಂಕಿರಣ ಕಾರ್ಯಕ್ರಮದ 2ನೇ ದಿನದಂದು `ಭವಿಷ್ಯದ ಯಶಸ್ಸಿಗೆ ಕೌಶಲ್ಯ ಆಧಾರಿತ ಪಠ್ಯಕ್ರಮ’ ಮತ್ತು `ವಿದ್ಯಾರ್ಥಿ ಕೇಂದ್ರಿತ ಕಲಿಕೆ’ ವಿಷಯ ಆಧರಿಸಿ ಅವರು ಮಾತನಾಡಿದರು.

ವಿದ್ಯಾರ್ಥಿಗಳು ಹೆಚ್ಚಿನ ಶ್ರಮದೊಂದಿಗೆ ವಿಮರ್ಶಾತ್ಮಕ ಚಿಂತನೆ, ಸಾಂಸ್ಕೃತಿಕ ತಿಳುವಳಿಕೆ, ಸಹಾನುಭೂತಿ ಮತ್ತು ಸಹಯೋಗದಂತಹ ಸಾಮರ್ಥ್ಯ ಬೆಳೆಸಿಕೊಳ್ಳಬೇಕು ಎಂದರು.

ಈ ವೇಳೆ ಡಾ. ಲೆಬರ್ನ್ ರೋಸ್, ಡಾ. ಲಾರೆನ್ಸ್ ಫಿಶೆರ್, ಜಿ.ಎಂ ವಿವಿ ಕುಲಪತಿ ಡಾ.ಎಸ್.ಆರ್ ಶಂಖಪಾಲ್, ಉಪಕುಲಪತಿ ಡಾ.ಡಿ. ಮಹೇಶಪ್ಪ, ರಿಜಿಸ್ಟಾರ್‌ ಡಾ.ಬಿ.ಎಸ್‌. ಸುನೀಲ್ ಕುಮಾರ್, ನಿರ್ದೇಶಕ ಡಾ. ಬಕ್ಕಪ್ಪ, ಕಾಲೇಜಿನ ಪ್ರಾಚಾರ್ಯ ಡಾ.ಎಂ.ಬಿ. ಸಂಜಯ್ ಪಾಂಡೆ, ಎಂಬಿಎ ವಿಭಾಗದ ಮುಖ್ಯಸ್ಥ ಡಾ.ಪಿ.ಎಸ್‌ ಬಸವರಾಜ್ ಮತ್ತು ಇತರರು ಇದ್ದರು.

error: Content is protected !!