ರಾಣೇಬೆನ್ನೂರು, ಮೇ 16 – ರೈತರಿಗೆ ನೀಡಲಾಗುತ್ತಿರುವ ಬೆಳೆ ಪರಿಹಾರ ವಿಮಾ ಹಣವನ್ನು ಅವರ ಸಾಲದ ಕಂತುಗಳಿಗೆ ಜಮಾ ಮಾಡಿಕೊಳ್ಳದೆ, ಅವರ ಖಾತೆಗಳಿಗೆ ಜಮಾ ಮಾಡುವಂತೆ ಸರ್ಕಾರ ಆದೇಶ ಮಾಡಿದ್ದು, ಬ್ಯಾಂಕ್ ನವರಿಗೆ ಕಟ್ಟುನಿಟ್ಟಿನ ತಿಳುವಳಿಕೆ ನೀಡುವಂತೆ ಜಿಲ್ಲಾಧಿಕಾರಿಗಳಿಗೆ ಸೂಚನೆ ನೀಡಲಾಗಿದೆ ಎಂದು ಶಾಸಕ ಪ್ರಕಾಶ ಕೋಳಿವಾಡ ತಿಳಿದಿದ್ದಾರೆ. ಕಳೆದ ಎರಡು ವರ್ಷಗಳಿಂದ ಪ್ರಕೃತಿ ವಿಕೋಪದಿಂದಾಗಿ ರೈತರು ತೀವ್ರ ಸಂಕಷ್ಠ ಎದುರಿಸುತ್ತಿದ್ದು ಈಗ ಸರ್ಕಾರ ಕೊಡುವ ಹಣದಿಂದ ಈ ಬಾರಿಯಾ ಮುಂಗಾರು ಬಿತ್ತನೆಗೆ ಬೀಜ ಗೊಬ್ಬರಗಳ ಖರೀದಿಗೆ ಬಹಳಷ್ಟು ಸಹಕಾರಿಯಾಗಲಿದೆ, ಕಾರಣ ಬ್ಯಾಂಕಿನವರು ರೈತರ ಸಾಲ ವಸೂಲಿಗೆ ಆದ್ಯತೆ ಕೊಡದೆ ಅವರ ಖಾತೆಗಳಿಗೆ ಹಣ ಜಮಾ ಮಾಡಿ ಅವರ ಬದುಕಿಗೆ ಸಹಕಾರಿಗಳಾಗಬೇಕು ಎಂದು ಶಾಸಕರು ತಿಳಿಸಿದ್ದಾರೆ.
January 11, 2025