ಉತ್ತಮ ಹಾಡುಗಾರರಾಗಲು ನಿತ್ಯ ಕಲಿಕೆ ಮುಖ್ಯ

ಉತ್ತಮ ಹಾಡುಗಾರರಾಗಲು ನಿತ್ಯ ಕಲಿಕೆ ಮುಖ್ಯ

ದಾವಣಗೆರೆ, ಮೇ 16 – ಗೀತಗಾಯನ ತರಬೇತಿ ಶಿಬಿರದಲ್ಲಿ ಕಲಿತ ಸಾಹಿತ್ಯ ಮತ್ತು ಸಂಗೀತಾಭ್ಯಾಸ ಒಂದೆರಡು ದಿನಕ್ಕೆ ಸೀಮಿತ ವಾಗದೆ, ನಿತ್ಯವೂ ಸಂಗೀತಾಭ್ಯಾಸ ಮಾಡುತ್ತಾ ಉತ್ತಮ ಹಾಡುಗಾರರಾಗಿ ಎಂದು ನಿವೃತ್ತ ಪ್ರಾಧ್ಯಾಪಕರಾದ ನೀಲಾಂಬಿಕೆ ಹೇಳಿದರು.

ನಗರದ ಆರ್.ಹೆಚ್.ಗೀತಾ ಮಂದಿರದಲ್ಲಿ ಇತ್ತಿಚೇಗೆ ಶರಧಿ ಕಲಾ ಸಾಂಸ್ಕೃತಿಕ ಸಂಸ್ಥೆ ಮತ್ತು ಕಲಾಕುಂಚ ಸಾಂಸ್ಕೃತಿಕ ಸಂಸ್ಥೆಯ ಸಂಯುಕ್ತಾಶ್ರಯದಲ್ಲಿ ಗೀತ ಗಾಯನ ತರಬೇತಿ ಶಿಬಿರದ ಸಮಾರೋಪ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಸಂಗೀತ ನಿರ್ದೇಶಕ ಬೆಂಗಳೂರಿನ ಉಪಾಸನಾ ಮೋಹನ್ ಮಾತನಾಡಿ, ಸಂಗೀತ ಸಂಪ್ರದಾಯವು ಜೀವನದ ಅವಿಭಾಜ್ಯ ಅಂಗವಾಗಿದ್ದು, ಸಂಕುಚಿತ ಭಾವನೆ ಬಿಟ್ಟು ವಿಶಾಲ ಮನೋಭಾವ ರೂಢಿಸಿಕೊಳ್ಳುವಂತೆ ಸಲಹೆ ನೀಡಿದರು.

ಅನುಶ್ರೀ ಸಂಗೀತ ಶಾಲೆಯ ಸಂಸ್ಥಾಪಕರಾದ ವೀಣಾ ಸದಾನಂದ ಹೆಗಡೆ ಮಾತನಾಡಿ, ಸಂಗೀತಗಾರರು ರಾಗ, ತಾಳ ಮತ್ತು ರಾಗ ಸಂಯೋಜನೆಗಳ ಪರಿಜ್ಞಾನ ಬೆಳೆಸಿಕೊಂಡರೆ, ಉತ್ತಮ ಹಾಡುಗಾರರಾಗಬಹುದು ಎಂದರು.

ಶಿಬಿರದಲ್ಲಿ ಮಕ್ಕಳ ಮನರಂಜನೆಗಾಗಿ ರಾಮಾಯಣ, ಮಹಾಭಾರತ, ಜಾಣ ಗಣಿತ, ಜಾಣ ಒಗಟು, ದಾವಣಗೆರೆ ಇತಿಹಾಸ ಮತ್ತು ಪರಂಪರೆಯ ಕುರಿತಾದ ಪ್ರಶ್ನೋತ್ತರ, ಆಟೋಟ ಸ್ಪರ್ಧೆಗಳು ನಡೆದವು.

ಶರಧಿ ಕಲಾ ಸಾಂಸ್ಕೃತಿಕ ಸಂಸ್ಥೆಯ ಸಂಸ್ಥಾಪಕರಾದ ಶೋಭಾ ರಂಗನಾಥ್ ಪ್ರಾಸ್ತಾವಿಕ ಮಾತನಾಡಿದರು.

ಕರ್ನಾಟಕ ಸುಗಮ ಸಂಗೀತ ಪರಿಷತ್ತಿನ ತಾಲ್ಲೂಕು ಘಟಕದ ಅಧ್ಯಕ್ಷ ಮಾಲತೇಶ್ ಕುಲಕರ್ಣಿ, ಕಲಾಕುಂಚದ ಹಾವೇರಿ ಜಿಲ್ಲಾಧ್ಯಕ್ಷ ಪರಮೇಶ್ವರಯ್ಯ ವೀರಭದ್ರಯ್ಯ ಮಠದ್, ಜೆ.ಶಿಲ್ಪಾ, ಹಾಲಸ್ವಾಮಿ ಮತ್ತು ಇತರರು ಇದ್ದರು.

error: Content is protected !!