ಕಾಯಕದ ಮಹತ್ವ ಸಾರಿದ ವಿಶ್ವಗುರು ಬಸವಣ್ಣ

ಕಾಯಕದ ಮಹತ್ವ ಸಾರಿದ ವಿಶ್ವಗುರು ಬಸವಣ್ಣ

ತಾಲ್ಲೂಕು ಕಸಾಪ ಕಾರ್ಯಕ್ರಮದಲ್ಲಿ ಎಜಿಬಿ ಪದವಿಪೂರ್ವ ಕಾಲೇಜಿನ ಉಪನ್ಯಾಸಕರಾದ ಉಷಾ

ದಾವಣಗೆರೆ, ಮೇ 16 – ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್, ಪ್ರಜ್ಞಾ ವೇದಿಕೆ ವನಿತಾ ಸಮಾಜ, ವನಿತಾ ಸಾಹಿತ್ಯ ವೇದಿಕೆ, ಹಾಗೂ ಹಿರಿಯ ನಾಗರಿಕರ ಸಹಾಯವಾಣಿ ಇವರ ಸಹಯೋಗದಲ್ಲಿ ಬಸವ ಜಯಂತಿ, ತಾಯಂದಿರ ದಿನಾಚರಣೆ ಹಾಗೂ ದತ್ತಿ ಉಪನ್ಯಾಸ ಕಾರ್ಯಕ್ರಮ ಹಿರಿಯ ವನಿತೆಯರ ಆನಂದಧಾಮದಲ್ಲಿ ನಡೆಯಿತು. 

ಪ್ರಜ್ಞಾ ವೇದಿಕೆಯ ಅಧ್ಯಕ್ಷರಾದ ಶ್ರೀಮತಿ ಜಯಮ್ಮ ನೀಲಗುಂದ ಅವರು ಅಧ್ಯಕ್ಷತೆ ವಹಿಸಿದ್ದರು. ಆನಂದ ಧಾಮದ ಹಿರಿಯ ವನಿತೆಯರು ಹಾಗೂ ವೇದಿಕೆಯಲ್ಲಿದ್ದ ಅತಿಥಿಗಳು ವಿಶ್ವಗುರು ಬಸವಣ್ಣನವರಿಗೆ ಪುಷ್ಪಾರ್ಚನೆ ಮಾಡುವ ಮೂಲಕ ಕಾರ್ಯಕ್ರಮವನ್ನು ಉದ್ಘಾಟಿಸಿದರು.

ಎಜಿಬಿ ಪದವಿಪೂರ್ವ ಕಾಲೇಜಿನ ಉಪನ್ಯಾಸಕ ರಾದ ಶ್ರೀಮತಿ ಉಷಾ ಅವರು ವಿಶ್ವಗುರು ಬಸವಣ್ಣ ನವರ ಕುರಿತು ದತ್ತಿ ಉಪನ್ಯಾಸ ನೀಡಿ, ಕಾಯಕದ ಮಹತ್ವ ಸಾರಿದ ವಿಶ್ವಗುರು ಬಸವಣ್ಣ ಶರಣರು ವ್ಯಕ್ತಿಯನ್ನು ಅವರ ಕಾಯಕದಿಂದ ಗುರುತಿಸುತ್ತಿದ್ದರೇ ಹೊರತು ಅವರ ಜಾತಿಯಿಂದ ಅಲ್ಲ. ಬಸವಣ್ಣನವರ ದೃಷ್ಟಿಯಲ್ಲಿ ವ್ಯಕ್ತಿ ಹಾಗೂ ಸಮಾಜದ ಬದುಕು ಹಸನಾಗಲು ಕಾಯಕ ಮಾಡಲೇಬೇಕು. ಈ ಭೂಮಿಯ ಅಪರಿಮಿತ ಶಕ್ತಿಯಾಗಿ ಉದಯಿಸಿದವರೇ ಬಸವಣ್ಣ 12ನೇ ಶತಮಾನದ ಯುಗಪುರುಷರಾಗಿ, ಇಷ್ಟಲಿಂಗ ಪೂಜೆಯ ಮೂಲಕ ಶಿವಪಥದ ಅರಿವು ಮೂಡಿಸಿ, ಅಂತರಂಗ, ಬಹಿರಂಗದ ಸಾರ್ಥಕತೆಯ ಹರಿಕಾರರಾಗಿ ಕಾಯಕವೇ ಕೈಲಾಸ ಎಂಬ ಶ್ರಮ ಸಂಸ್ಕೃತಿಯ ಪ್ರಚುರಪಡಿಸಿ, ಮಾತಿನ ಮಹತ್ವ ತಿಳಿ ಸುತ್ತಾ, ಲಿಂಗ ಮೆಚ್ಚಿ ತಲೆದೂಗಬೇಕೆಂದು ಸೂಚಿಸಿ ಕಾಗೆ-ಕೋಳಿಗಳು ಬಂಧು-ಬಳಗವ ಉಣಲು ಆಹ್ವಾನಿಸಿದಂತೆ ಮನುಷ್ಯ ಸಹಕಾರ ಮನೋಭಾವ ಬೆಳೆಸಿಕೊಳ್ಳಬೇಕೆಂದು ಹೇಳುತ್ತಾ ಎಲ್ಲರೊಳಗೊಂ ದಾಗುವ ಸರ್ವ ಜನಾಂಗದ ವೇದಿಕೆಯಾಗಿ ಅನುಭವ ಮಂಟಪಕ್ಕೆ ಅರ್ಥ ನೀಡುವುದರ ಫಲವೇ ಅವರು ವಿಶ್ವಗುರು ಸಾಂಸ್ಕೃತಿಕ ನಾಯಕರಾಗಲು ಕಾರಣೀಭೂತವಾಯಿತು ಎಂದು ಹೇಳಿದರು. 

ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ಮಹಿಳಾ ಸೇವಾ ಸಮಾಜ ಪದವಿಪೂರ್ವ ಕಾಲೇಜಿನ ಉಪ ನ್ಯಾಸಕಿ ಶ್ರೀಮತಿ ರಾಜೇಶ್ವರಿ ವೈ.ಎಂ. ತಾಯಂದಿರ ದಿನಾಚರಣೆ ಪ್ರಯುಕ್ತ ತಾಯಂದಿರ ಮಹತ್ವದ ಕುರಿತು ಮಾತನಾಡಿ, ತಾಯಂದಿರ ದಿನಾಚರಣೆ ಆರಂಭವಾದ ದ್ದನ್ನು ವಿವರಿಸಿ ಕುಟುಂಬದ ಸಾಮರಸ್ಯ ಹಾಗೂ ಏಳಿಗೆ ಯಲ್ಲಿ ತಾಯಿಯ ಪಾತ್ರದ ಮಹತ್ವವನ್ನು ತಿಳಿಸಿದರು.

ತಾಲ್ಲೂಕು ಕಸಾಪ ನಿರ್ದೇಶಕ ಷಡಕ್ಷರಪ್ಪ ಎಂ. ಬೇತೂರು ಪ್ರಾಸ್ತಾವಿಕ ನುಡಿಗಳನ್ನಾಡಿದರು. ಕಾರ್ಯಕ್ರಮದಲ್ಲಿ ತಾಲ್ಲೂಕು ಕಸಾಪ ಗೌರವ ಕಾರ್ಯದರ್ಶಿ ನಾಗರಾಜ ಸಿರಿಗೆರೆ, ನಿರ್ದೇಶಕ ಕುರ್ಕಿ ಸಿದ್ದೇಶ, ಪ್ರಜ್ಞಾ ವೇದಿಕೆ ಕಾರ್ಯದರ್ಶಿ ಶ್ರೀಮತಿ ಶಿವರತ್ನ, ಲೇಖಕಿ ಶ್ರೀಮತಿ ಶೈಲಜಾ, ಶ್ರೀಮತಿ ವಾಗ್ದೇವಿ ಉಪಸ್ಥಿತರಿದ್ದರು.

ಕಾರ್ಯಕ್ರಮದಲ್ಲಿ ಪ್ರಾರ್ಥನೆಯನ್ನು ಆನಂದ ಧಾಮದ ಹಿರಿಯ ವನಿತೆಯರು, ಸ್ವಾಗತವನ್ನು ಹಿರಿಯ ಸಾಹಿತಿ ಜಿಲ್ಲಾ ಕಸಾಪ ನಿರ್ದೇಶಕರಾದ ಶ್ರೀಮತಿ ಮಲ್ಲಮ್ಮ ನಾಗರಾಜ, ವಂದನಾರ್ಪಣೆಯನ್ನು ತಾಲ್ಲೂಕು ಕಸಾಪ ಗೌರವ ಕಾರ್ಯದರ್ಶಿಗಳಾದ ದಾಗಿನಕಟ್ಟೆ ಪರಮೇಶ್ವರಪ್ಪ, ನಿರೂಪಣೆಯನ್ನು ಪ್ರಧ್ಯಾಪಕಿ ಶ್ರೀಮತಿ ಸುಶೀಲ ಬಸವರಾಜ ಹಿರೇಮಠ ಮಾಡಿದರು.

error: Content is protected !!