ಹರಿಹರ, ಮೇ 15- ಇಲ್ಲಿಗೆ ಸಮೀಪದ ಕುಮಾರಪಟ್ಟಣದ ಕೊಡಿಯಾಲ ಹೊಸಪೇಟೆ ಗ್ರಾಮದ ಹತ್ತಿರ ತುಂಗಭದ್ರಾ ನದಿಯ ದಡದಲ್ಲಿರುವ, ಐತಿಹಾಸಿಕ ನಾಗಬನ ಮತ್ತು ಮೂಲದುರ್ಗಾ ದೇವಿ ದೇವಸ್ಥಾನ ಸಮಿತಿಯಿಂದ, ಇದೇ ದಿನಾಂಕ 20 ಮತ್ತು 21 ರಂದು ವಿಶೇಷ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿರುವುದಾಗಿ ಧರ್ಮದರ್ಶಿ ಮಂಜುನಾಥ ತಿಳಿಸಿದ್ದಾರೆ.
ಬುಧವಾರ ದೇವಸ್ಥಾನದಲ್ಲಿ ಪ್ರಚಾರ ಪರಿಕರಗಳನ್ನು ಬಿಡುಗಡೆಗೊಳಿಸಿದ ಅವರು ಮಾತನಾಡಿ, ದಿನಾಂಕ 20 ರಂದು ಸಂಜೆ 4 ಗಂಟೆಯಿಂದ ಕೊಡಿಯಾಲ ಹೊಸಪೇಟೆ ಗ್ರಾಮದ ದುಂಡಿ ಬಸವೇಶ್ವರ ದೇವಸ್ಥಾನದಿಂದ ದುರ್ಗಾದೇವಿ ನೂತನ ಬಿಂಬ ಉತ್ಸವ, ಕುಂಭಮೇಳ, ಅಂಬಾರಿ ಉತ್ಸವವಿರುತ್ತದೆ.
ದಿನಾಂಕ 21 ರಂದು ಬೆಳಿಗ್ಗೆ ಆದ್ಯ ಗಣಯಾಗ, ಪಂಚ ಕಲಶ ಪ್ರದಾನಯಾಗ, ಕಲಶಾಭಿಷೇಕ, ಚಂಡಿಕಾಯಾಗ, ಪ್ರಸಾದ ವಿತರಣೆ ನಡೆಯಲಿದೆ ಎಂದು ತಿಳಿಸಿದರು. ಪಾರ್ವತಮ್ಮ ಕರ್ಲಡೆಪ್ಪನವರ, ಇಂದೂಧರ ಸ್ವಾಮಿ, ಕಂಚಿಕೆರಿ ಕರಬಸಪ್ಪ, ವೀರೇಶ್ ಇದ್ದರು.