ದಾವಣಗೆರೆ, ಏ.22- ಸಮಾಜಮುಖಿ ಕವಿತೆಗಳು ಸಮಾಜದ ಅಂಕು-ಡೊಂಕು ತಿದ್ದುವಲ್ಲಿ ಬಹುಮುಖ್ಯ ಪಾತ್ರ ವಹಿಸಲಿವೆ ಎಂದು ಜಿಲ್ಲಾ ಚುಟುಕು ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ರಾಜಶೇಖರ್ ಗುಂಡಗಟ್ಟಿ ಹೇಳಿದರು.
ಅಖಿಲ ಭಾರತೀಯ ಸಾಹಿತ್ಯ ಪರಿಷದ್ ಮತ್ತು ಭಾವಸಿರಿ ಪ್ರಕಾಶನದ ಸಂಯುಕ್ತಾಶ್ರಯದಲ್ಲಿ ವಿನೋಬ ನಗರದ ಸಿದ್ದಿವಿನಾಯಕ ಸಾಂಸ್ಕೃತಿಕ ಶಾಲೆಯಲ್ಲಿ ಭಾನುವಾರ ನಡೆದ ಯುಗಾದಿ ಕವಿಗೋಷ್ಠಿಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಕವಿತೆಗಳು ಸಮಾಜ ಮುಖಿಯಾಗಿರ ಬೇಕು, ಸಮಾಜದಲ್ಲಿ ನಡೆಯುವ ಸನ್ನಿವೇಶ ಗಳನ್ನು ಕವಿತೆಗಳ ರೂಪದಲ್ಲಿ ರಚಿಸುವಂತೆ ಯುವ ಕವಿಗಳಿಗೆ ಸಲಹೆ ನೀಡಿದರು.
ಅಭಾಸಾಪ ಜಿಲ್ಲಾ ಕಾರ್ಯದರ್ಶಿ ಅಣಬೇರು ತಾರೇಶ್ ಪ್ರಾಸ್ತಾವಿಕವಾಗಿ ಮಾತನಾಡಿ, ಕವಿಗೋಷ್ಠಿಗಳಿಗೆ ಅರ್ಥ ಬರಬೇಕೆಂದರೆ ಕವಿಗಳು ಹೆಚ್ಚಿನ ಸಂಖ್ಯೆಯಲ್ಲಿ ಸೇರಬೇಕು. ಆಗ ಮಾತ್ರ ಕವಿಗೋಷ್ಠಿ ಯಶಸ್ವಿ ಆಗಲು ಸಾಧ್ಯ ಎಂದರು.
ಶಿವಯೋಗಿ ಹಿರೇಮಠ್, ಮಲ್ಲಮ್ಮ ನಾಗರಾಜ್, ಲಲಿತ್ ಕುಮಾರ್ ಜೈನ್, ಉಷಾ, ಸುಶೀಲಾ ಹಿರೇಮಠ್. ಶ್ಯಾಮಲಾದೇವಿ, ಜಯರಾಮನ್, ಅಭಾಸಾಪದ ಪ್ರಶಾಂತ್, ಮಹಾಂತೇಶ್, ಪೂಜಾ, ಶಿವಮೂರ್ತಿ, ಪರಮೇಶ್ವರಪ್ಪ ಕತ್ತಿಗೆ, ಅಜಯ್ ನಾರಾಯಣ್ ಮತ್ತು ಇತರರು ಇದ್ದರು.
ಸುನೀತಾ ಪ್ರಕಾಶ್ ಸ್ವಾಗತಿಸಿದರು. ಉಮಾದೇವಿ ಹಿರೇಮಠ್ ನಿರೂಪಿಸಿದರು. ಕೆ.ಎಮ್. ಅಮರೇಶ್ ವಂದಿಸಿದರು.