ರಾಣೇಬೆನ್ನೂರು : ಪಾದಚಾರಿ ಮಾರ್ಗ ತೆರವಿಗೆ ನಾಗರಿಕ ಹಿತರಕ್ಷಕ ವೇದಿಕೆ ಆಗ್ರಹ

ರಾಣೇಬೆನ್ನೂರು, ಮೇ 15 –  ನಗರದ ಅಶೋಕ ವೃತ್ತದಿಂದ ಚರ್ಚ್ ರಸ್ತೆ, ಮೆಡ್ಲೇರಿ ಕ್ರಾಸ್‌ನಿಂದ ಎಡಿಬಿ ಕ್ರಾಸ್ ಹಾಗೂ ಅಂಚೆ ಕಛೇರಿ ಹಿಂಭಾಗದಲ್ಲಿ ಪಾದ ಚಾರಿ ರಸ್ತೆಯನ್ನು ಅತಿಕ್ರಮಣ ಮಾಡಿದ್ದು, ಪಾದಚಾರಿ ಗಳ ಸಂಚಾರಕ್ಕೆ ತೀವ್ರ ತೊಂದರೆ ಆಗುತ್ತಿದ್ದು, ನಗರಸಭೆಯವರು ತಕ್ಷಣ ಕ್ರಮಕೈಗೊಳ್ಳುವಂತೆ ಇಲ್ಲಿನ ನಾಗರಿಕ ಹಿತರಕ್ಷಕ ವೇದಿಕೆ ಒತ್ತಾಯಿಸಿದೆ.

ನಗರದಾದ್ಯಂತ ಇಂತಹ ಪ್ರಕರಣಗಳಿದ್ದು, ನಗರಸಭೆ ಎಲ್ಲಾ ಅತಿಕ್ರಮಣಗಳ ವಿರುದ್ಧ ಹಂತ – ಹಂತವಾಗಿ ಹೋರಾಟ ಮಾಡಲು ವೇದಿಕೆ ಸಜ್ಜಾಗಿದ್ದು, ಜನಪರ ಚಿಂತನೆಯ ನಮ್ಮ ಹೋರಾಟಕ್ಕೆ ಸಾರ್ವಜನಿಕರು ಹಾಗೂ ಅಧಿಕಾರಿಗಳು ಸಹಕಾರ ನೀಡಬೇಕು ಎಂದು ಡಾ. ಎಸ್.ಎಲ್.ಪವಾರ ಹಾಗೂ ಡಾ. ಗಿರೀಶ್ ಕೆಂಚಪ್ಪನವರ ಮನವಿ ಮಾಡಿದ್ದಾರೆ.

error: Content is protected !!