ಮಲೇಬೆನ್ನೂರು, ಮೇ 15- ನಿಟ್ಟೂರು ಗ್ರಾಮದಲ್ಲಿ ಜರುಗಿದ ಗ್ರಾಮದೇವತೆ ಶ್ರೀ ಮಾರಿಕಾಂಭ ದೇವಿ ಹಬ್ಬದ ಅಂಗವಾಗಿ ಬುಧವಾರ ಸಂಜೆ ಬಾಡೂಟಕ್ಕೆ ಆಗಮಿಸಿದ್ದ ಬಂಧು ಮಿತ್ರರಿಂದಾಗಿ ಗ್ರಾಮದಲ್ಲಿ ಟ್ರಾಫಿಕ್ ಜಾಮ್ ಉಂಟಾಗಿತ್ತು.
16 ವರ್ಷಗಳ ನಂತರ ನಡೆದ ಗ್ರಾಮದೇವತೆ ಹಬ್ಬವನ್ನು ಗ್ರಾಮಸ್ಥರು ಬಹಳ ಸಂಭ್ರಮದಿಂದ ಆಚರಿಸಿದರು. ಬುಧವಾರ ಸಂಜೆ ಸುಮಾರು ಸಾವಿರಕ್ಕೂ ಹೆಚ್ಚು ಕಾರು, ಬೈಕುಗಳು ಗ್ರಾಮಕ್ಕೆ ಬಂದಿದ್ದರಿಂದ ರಾತ್ರಿ 10 ರವರೆಗೆ ಆಗಿದ್ದ ಟ್ರಾಫಿಕ್ ಜಾಮ್ ನಂತರ ಸಹಜ ಸ್ಥಿತಿಗೆ ಬಂದಿತು. ದೇವಸ್ಥಾನದಲ್ಲಿ ಬೆಳಗಿನ ಜಾವ ಹಿಟ್ಟಿನ ಕೋಣದ ಬಲಿ ನೀಡಿದ ನಂತರ ಅಮ್ಮನಿಗೆ ಪೂಜೆ ಸಲ್ಲಿಸಲಾಯಿತು ನಂತರ ಭಕ್ತರಿಂದ ವಿವಿಧ ರೀತಿಯ ಸೇವೆ – ಹರಕೆಗಳು ಸಂಜೆಯವರೆಗೂ ನಡೆದವು.