ಹೊನ್ನಾಳಿ, ಮೇ 14 – ಶ್ರೀ ಸಾಯಿ ಗುರುಕುಲ ವಸತಿಯುತ ಸಿ.ಬಿ.ಎಸ್.ಇ ಶಾಲೆಗೆ 10ನೇ ತರಗತಿಯಲ್ಲಿ ಶೇ.100 ಫಲಿತಾಂಶ ಬಂದಿದೆ ಎಂದು ಸಂಸ್ಥೆಯ ಕಾರ್ಯದರ್ಶಿ ಸೌಮ್ಯ ಪ್ರದೀಪ್ ಗೌಡ ತಿಳಿಸಿದರು.
2023-24ನೇ ಸಾಲಿನ 10ನೇ ತರಗತಿಯ ಪರೀಕ್ಷೆಗೆ 46 ವಿದ್ಯಾರ್ಥಿಗಳು ಹಾಜರಾಗಿದ್ದು, ಅವರಲ್ಲಿ 12 ವಿದ್ಯಾರ್ಥಿಗಳು ಅತ್ಯುನ್ನತ ಶ್ರೇಣಿಯಲ್ಲಿ ತೇರ್ಗಡೆಯಾಗಿದ್ದು, 20 ವಿದ್ಯಾರ್ಥಿಗಳು ಪ್ರಥಮ ಸ್ಥಾನ, 14 ವಿದ್ಯಾರ್ಥಿಗಳು ದ್ವಿತೀಯ ಸ್ಥಾನ ಪಡೆದು ತೇರ್ಗಡೆಯಾಗಿದ್ದಾರೆ.
ಎಂ.ಆರ್.ಶ್ರೇಯಾ 500 ಅಂಕಗಳಿಗೆ 471 ಅಂಕಗಳನ್ನು ಪಡೆದು ಶೇ.94.2 ಪ್ರಥಮ, ಎಂ.ಮೇಘರಾಜ್ 500 ಅಂಕಗಳಿಗೆ 462 ಅಂಕಗಳನ್ನು ಪಡೆದು ಶೇ.92.4 ದ್ವಿತೀಯ, ಎಂ.ಜಿ.ತನುಶ್ರೀ 500 ಅಂಕಗಳಿಗೆ 457 ಅಂಕಗಳನ್ನು ಪಡೆದು ಶೇ.91.4 ತೃತೀಯ ಸ್ಥಾನ ಪಡೆದಿದ್ದಾರೆ.
ವಿದ್ಯಾರ್ಥಿಗಳಿಗೆ ಸಂಸ್ಥೆಯ ಅಧ್ಯಕ್ಷ ಶಾಸಕ ಡಿ.ಜಿ.ಶಾಂತನಗೌಡ, ಖಜಾಂಚಿ ಡಿ.ಎಸ್.ಸೋಮಪ್ಪ, ಉಪಾಧ್ಯಕ್ಷರಾದ ಡಿ.ಹೆಚ್. ಶಂಕ್ರಪ್ಪಗೌಡ, ನಿರ್ದೇಶಕ ರಾದ ವಾಣಿ ಸುರೇಂದ್ರಗೌಡ, ಡಿ.ಎಸ್.ಪ್ರದೀಪ್ ಗೌಡ, ಡಿ.ಎಸ್.ಅರುಣ್, ಹೆಚ್.ಬಿ.ಅರುಣ್, ಗೌರಮ್ಮ, ಜಿ.ಆರ್.ಶೀಲಾ, ಪ್ರಾಂಶುಪಾಲರಾದ ಹೆಚ್.ಎಂ.ದರ್ಶನ್, ಶಿಕ್ಷಣ ಸಂಯೋಜಕ ಎ.ಜಿ.ಹರೀಶ್ ಕುಮಾರ್ ಅಭಿನಂದನೆ ಸಲ್ಲಿಸಿದ್ದಾರೆ.