ದವನ್ – ನೂತನ ವಿದ್ಯಾಸಂಸ್ಥೆಯಿಂದ ಡೆವಲಪಿಂಗ್ ಎಂಪ್ಲಾಯಬಿಲಿಟಿ ವರ್ಕ್‌ಶಾಪ್

ದವನ್ – ನೂತನ ವಿದ್ಯಾಸಂಸ್ಥೆಯಿಂದ ಡೆವಲಪಿಂಗ್ ಎಂಪ್ಲಾಯಬಿಲಿಟಿ ವರ್ಕ್‌ಶಾಪ್

ದಾವಣಗೆರೆ, ಮೇ 14- ನಗರದ ದವನ್-ನೂತನ ವಿದ್ಯಾಸಂಸ್ಥೆ ವತಿಯಿಂದ 2024ರ ಅಂತಿಮ ವರ್ಷದ ಬಿ.ಕಾಂ., ಬಿಬಿಎ ವಿದ್ಯಾರ್ಥಿಗಳಿಗೆ ಉದ್ಯೋಗಿಗಳಾಗಲು, ಪೂರ್ವ ತಯಾರಿಯ ಸಲುವಾಗಿ ಈಚೆಗೆ ಡೆವಲಪಿಂಗ್ ಎಂಪ್ಲಾಯಬಿಲಿಟಿ ವರ್ಕ್‌ಶಾಪ್ ಏರ್ಪಡಿಸಲಾಗಿತ್ತು.

ವರ್ಕ್‌ಶಾಪ್‌ನ ನೇತೃತ್ವವನ್ನು ಸಂಸ್ಥೆಯ ಜಂಟಿ ಕಾರ್ಯದರ್ಶಿ ಹಾಗೂ ಪ್ರಾಚಾರ್ಯರಾದ ಡಾ. ಜಿ.ಎಸ್. ಅಂಜು ವಹಿಸಿದ್ದರು.

ಕಾರ್ಯಾಗಾರಕ್ಕೆ ಸಂಪನ್ಮೂಲ ವ್ಯಕ್ತಿಗಳಾಗಿ ಕನ್ಸಲ್ಟೆಂಟ್ ಅಕಾಡೆಮಿಕ್ ಅಸೆಸ್‌ಮೆಂಟ್ ಮತ್ತು ಡೆವಲಪಿಂಗ್ ಎಂಪ್ಲಾಯಬಿಲಿಟಿ ಪುಸ್ತಕದ ಲೇಖಕರಾದ ಡಾ. ಆರ್.ಎಲ್. ನಂದೀಶ್ವರ ಉಪಸ್ಥಿತರಿದ್ದರು. ವರ್ಕ್‌ಶಾಪ್‌ನ ಬಗ್ಗೆ ವಿದ್ಯಾರ್ಥಿಗಳಾದ ಕು. ಅಂಬಿಕಾ ಮಾತನಾಡಿ, ನನ್ನ ವ್ಯಕ್ತಿತ್ವ ವಿಕಸನದ ಜೊತೆಗೆ ವೃತ್ತಿ ಜೀವನಕ್ಕೆ ನಾನೆಷ್ಟು ತಯಾರಾಗಬೇಕು ಎಂಬ ಅಂಶ ಇದರಿಂದ ತಿಳಿದಿದೆ ಎಂದರು.

ಮತ್ತೋರ್ವ ವಿದ್ಯಾರ್ಥಿ ಅರ್ಪಿತಾ, ಗಗನ್ ಮಾತನಾಡಿ, ಮೈ ಸ್ಟ್ರೆಂತ್ ಅಂಡ್ ಪ್ರೊಫೆಷನಲ್ ಫಾರ್ ಮೈ ಎಂಪ್ಲಾಯಬಿಲಿಟಿ ಅರಿಯಲು ಹಾಗೂ ಹ್ಯಾಬಿಟ್ಸ್‌ ಟೀಂ ವರ್ಕ್‌, ಟೈಂ ಮ್ಯಾನೇಜ್‌ಮೆಂಟ್ ಜೊತೆಗೆ ಅಪ್ಲಿಕೇಬಲ್ ಫಾರ್ ಡೆವಲಪಿಂಗ್, ಎಂಪ್ಲಾಯಬಿಲಿಟಿ ಸ್ಕಿಲ್ ಬಗ್ಗೆ ತಿಳಿಯುವಂತಾಯಿತು ಎಂದರು.

ಕು. ಗೌರಿ ಮಾತನಾಡಿ, ಮುಖ್ಯವಾಗಿ ಲರ್ನ್ ಅಂಡ್ ಪ್ರಾಕ್ಟೀಸ್‌ನ ಪ್ರೊಫೆಷನಲ್ ನಾಲೆಡ್ಜ್ ಅಂಡ್ ಸ್ಕಿಲ್ಸ್ ಟು ಹ್ಯಾವ್ ಎಡ್ಜ್ ಓವರ್ ಅದರ್ಸ್ ಫಾರ್ ಎಂಪ್ಲಾಯಬಿಲಿಟಿ ಬಗ್ಗೆ ತಿಳಿಯಲು ಸಹಕಾರ ನೀಡಿದ ಆಡಳಿತ ಮಂಡಳಿಗೆ ನಾನು ಕೃತಜ್ಞಳಾಗಿದ್ದೇನೆ ಎಂದರು.

error: Content is protected !!