12ನೇ ಶತಮಾನದಲ್ಲೇ ಸಂಸತ್ತಿನ ಪರಿಕಲ್ಪನೆ

12ನೇ ಶತಮಾನದಲ್ಲೇ ಸಂಸತ್ತಿನ ಪರಿಕಲ್ಪನೆ

ದಾವಣಗೆರೆ, ಮೇ 13- ಬಸವಣ್ಣನವರು ಅನುಭವ ಮಂಟಪ ಸ್ಥಾಪಿಸಿ, 12ನೇ ಶತಮಾನದಲ್ಲೇ ಸಂಸತ್ತಿನ ಪರಿ ಕಲ್ಪನೆ ತೋರಿಸಿದ್ದಾರೆ ಎಂದು ವಕೀಲರ ಸಂಘದ ಜಿಲ್ಲಾಧ್ಯಕ್ಷ ಎಲ್.ಎಚ್. ಅರುಣ್ ಕುಮಾರ್ ಹೇಳಿದರು.

ಕಾಯಕಯೋಗಿ ಬಸವ ಪರಿಸರ ಸಂರಕ್ಷಣಾ ವೇದಿಕೆ ಹಾಗೂ ವಿನಾಯಕ ಭಜನಾ ಮಂಡಳಿ ಇವರ ಆಶ್ರಯದಲ್ಲಿ ಇತ್ತೀಚೆಗೆ ನಡೆದ ಬಸವ ಜಯಂತಿ ಕಾರ್ಯಕ್ರಮ ಉದ್ಘಾಟಿಸಿ, ಅವರು ಮಾತನಾಡಿದರು. ಬಸವಣ್ಣನವರು ಮಾನವತಾವಾದಿ ಮತ್ತು ಶ್ರೇಷ್ಠ ಚಿಂತಕರಾಗಿದ್ದರು. ಅವರ ಚಿಂತನೆ ಮತ್ತು ವಚನಗಳು ಮಾನವ ಕಲ್ಯಾಣ ಬಯಸುವ ಅನೇಕರಿಗೆ ಸ್ಫೂರ್ತಿಯಾಗಿವೆ ಎಂದರು.

ಗುರು ಬಸವರ ಆದರ್ಶದ ತಳಹದಿಯಲ್ಲಿ ಬಸವ ಪರಿಸರ ವೇದಿಕೆಯು ಸಮಾಜಮುಖಿ ಕಾರ್ಯ ಮಾಡುತ್ತಿದ್ದು, ಹಿರಿಯರ ಸಹಾಯದೊಂದಿಗೆ ಯುವಕರು ಗ್ರಾಮದಲ್ಲಿ ಅಭಿವೃದ್ಧಿ ಕಾರ್ಯ ಮಾಡುತ್ತಿರುವುದು ಶ್ಲ್ಯಾಘನೀಯ ಎಂದರು.

ಪರಿಸರ ಸಂರಕ್ಷಣಾ ವೇದಿಕೆ ಅಧ್ಯಕ್ಷ ಎನ್.ಟಿ. ರುದ್ರಪ್ಪ ಮಾತನಾಡಿ, ಯುವ ಪೀಳಿಗೆ ಅತಿಯಾದ ಮೊಬೈಲ್‌ ಬಳಕೆಯನ್ನು ಬಿಡಬೇಕು. ಗಿಡ, ಮರ ಬೆಳೆಸುವ ಮನೋಭಾವದ ಜತೆಗೆ ಪರಿಸರ ಸಂರಕ್ಷಣೆ  ಕಾಳಜಿ ಹೊಂದಬೇಕು ಎಂಬ ಕಿವಿಮಾತು ಹೇಳಿದರು.

ಇದಕ್ಕೂ ಮೊದಲು ಗ್ರಾಮದಲ್ಲಿ ಭಜನೆಯ ಮೂಲಕ ಎತ್ತಿನಗಾಡಿಯಲ್ಲಿ ಬಸವಣ್ಣನವರ ಭಾವಚಿತ್ರವಿಟ್ಟು  ಮೆರವಣಿಗೆ ಮಾಡಲಾಯಿತು.

ಶಾಮಿಯಾನ ವೀರೇಶಣ್ಣ, ಶಿಕ್ಷಕ ಗುರುಸಿದ್ಧಸ್ವಾಮಿ, ಬಾನಪ್ಪ, ಸಿ.ಪಿ. ಮಲ್ಲಿಕಾರ್ಜುನ್, ತಿಪ್ಪೇಶ್, ಹಾಲೇಶಣ್ಣ, ಡಿ. ಕರಿಬಸಣ್ಣ, ಸಿಎಂ ಅರುಣ್, ಕೆರನಳ್ಳಿ ರಾಜು, ಮಾಂತೇಶ್, ಗೋಪಿನಾಥ್, ರಂಗಣ್ಣ ಇತರರು ಇದ್ದರು.

error: Content is protected !!