ಮಲೇಬೆನ್ನೂರು ಸಮೀಪದ ಕುಣೆಬೆಳಕೆರೆ ಗ್ರಾಮದಲ್ಲಿ ನೂತನವಾಗಿ ನಿರ್ಮಿಸಿರುವ ಶ್ರೀ ಬೀರಲಿಂಗೇಶ್ವರ ಬೃಹತ್ ಸಮುದಾಯ ಭವನ ಲೋಕಾರ್ಪಣೆ ಮತ್ತು ಶ್ರೀ ಗಣಪತಿ, ಶ್ರೀ ರೇವಣಸಿದ್ದೇಶ್ವರ, ಶ್ರೀ ಆಂಜನೇಯ ಸ್ವಾಮಿ ನೂತನ ಶಿಲಾಮೂರ್ತಿಗಳ
ಪ್ರಾಣ ಪ್ರತಿಷ್ಠಾಪನೆ ಕಾರ್ಯಕ್ರಮಗಳು ಇಂದು ಮತ್ತು ನಾಳೆ ನಡೆಯಲಿವೆ ಎಂದು ಗ್ರಾಮದ ಜಿ.ಸಿ.ರುದ್ರಪ್ಪ ತಿಳಿಸಿದ್ದಾರೆ. ಇಂದು ಸಂಜೆ ವಿವಿಧ ವಾದ್ಯಗಳೊಂದಿಗೆ ಬೇರೆ ಬೇರೆ ಊರುಗಳಿಂದ ಆಗಮಿಸುವ ಬೀರದೇವರುಗಳನ್ನು ಸ್ವಾಗತಿಸಲಾಗುವುದು.
ನಾಳೆ ಬುಧವಾರ ಬ್ರಾಹ್ಮೀ ಮುಹೂರ್ತದಲ್ಲಿ ನೂತನ ಸಮುದಾಯ ಭವನದ ಪ್ರಾರಂಭೋತ್ಸವ ಪೂಜೆ ಮತ್ತು ನೂತನ ಶಿಲಾಮೂರ್ತಿಗಳ ಪ್ರಾಣ ಪ್ರತಿಷ್ಠಾಪನೆ ನೆರವೇರಲಿದ್ದು, ಬೆಳಿಗ್ಗೆ 11 ಗಂಟೆಗೆ ಕಾಗಿನೆಲೆ ಕನಕ ಗುರುಪೀಠದ ಹೊಸದುರ್ಗ ಶಾಖಾಮಠದ ಶ್ರೀ ಈಶ್ವರಾನಂದ ಪುರಿ ಸ್ವಾಮೀಜಿ ಅವರಿಂದ ಆಶೀರ್ವಚನ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ.