ದಾವಣಗೆರೆ, ಮೇ 12 – ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ಜಿಲ್ಲೆಗೆ ಪ್ರಥಮ ಸ್ಥಾನ ಪಡೆದ ಶಾಮನೂರಿನ ಎಚ್.ಜಿ.ಗಾನ್ನವಿ ನಿವಾಸಕ್ಕೆ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಗಾಯತ್ರಿ ಸಿದ್ದೇಶ್ವರ ಭೇಟಿ ನೀಡಿ ಸನ್ಮಾನಿಸಿದರು. ಮುಂದಿನ ದಿನಗಳಲ್ಲಿ ಇನ್ನಷ್ಟು ಸಾಧನೆ ಮಾಡುವಂತೆ ಶುಭ ಹಾರೈಸಿದರು.
ಈ ವೇಳೆ ಪಾಲಕರಾದ ಎಚ್.ಎನ್.ಗಿರೀಶ್, ಜ್ಯೋತಿ, ಬಿಜೆಪಿ ಮುಖಂಡರಾದ ಸಂಕೋಳ್ ಚಂದ್ರಶೇಖರ್, ಗ್ಯಾರಳ್ಳಿ ಶಿವು, ರಾಜು ಮತ್ತು ಕುಟುಂಬಸ್ಥರು ಇದ್ದರು.