ಜೈನ್ ವಿದ್ಯಾಲಯಕ್ಕೆ ಉತ್ತಮ ಫಲಿತಾಂಶ

ಜೈನ್ ವಿದ್ಯಾಲಯಕ್ಕೆ  ಉತ್ತಮ ಫಲಿತಾಂಶ

ದಾವಣಗೆರೆ, ಮೇ 9 – ಪಿ.ಜೆ. ಬಡಾವಣೆಯ ಜೈನ್ ವಿದ್ಯಾಲಯ ಶಾಲೆಯಲ್ಲಿ ಎಸ್.ಎಸ್.ಎಲ್.ಸಿ. ಪರೀಕ್ಷೆಗೆ ಒಟ್ಟು 98 ವಿದ್ಯಾರ್ಥಿಗಳು ಹಾಜರಾಗಿದ್ದು, ಅವರಲ್ಲಿ 23 ವಿದ್ಯಾರ್ಥಿಗಳು ಡಿಸ್ಟಿಂಕ್ಷನ್, 55 ವಿದ್ಯಾರ್ಥಿಗಳು ಪ್ರಥಮ ದರ್ಜೆ, 12 ವಿದ್ಯಾರ್ಥಿಗಳು ದ್ವಿತೀಯ ದರ್ಜೆಯಲ್ಲಿ ಉತ್ತೀರ್ಣರಾಗಿದ್ದಾರೆ.  

ಶಾಲೆಯ ಕು. ಮನೋಜ್ ಹೆಗ್ಗಡೆ ಎಸ್.ಡಿ., 625 ಕ್ಕೆ 610 (97.6%) ಅಂಕಗಳನ್ನು ಗಳಿಸಿದ್ದಾರೆ.  ಸಂಸ್ಕೃತ – 3 ವಿದ್ಯಾರ್ಥಿಗಳು, ಇಂಗ್ಲೀಷ್ – 1 ವಿದ್ಯಾರ್ಥಿ, ಹಿಂದಿ – 5 ವಿದ್ಯಾರ್ಥಿಗಳು, ತೃತೀಯ ಭಾಷೆ ಕನ್ನಡ – 1 ವಿದ್ಯಾರ್ಥಿ, ಸಮಾಜ ವಿಜ್ಞಾನ – 1 ವಿದ್ಯಾರ್ಥಿ 100 ಕ್ಕೆ 100 ಅಂಕ ಗಳಿಸಿದ್ದಾರೆ.   

error: Content is protected !!