ಅತ್ಯಾಚಾರ ಪ್ರಕರಣ: 20 ವರ್ಷ ಜೈಲು ಶಿಕ್ಷೆ, 37 ಸಾವಿರ ದಂಡ

ಅತ್ಯಾಚಾರ ಪ್ರಕರಣ: 20 ವರ್ಷ ಜೈಲು ಶಿಕ್ಷೆ, 37 ಸಾವಿರ ದಂಡ

ದಾವಣಗೆರೆ, ಮೇ 9- ಅಪ್ರಾಪ್ತ ಬಾಲಕಿ ಮೇಲೆ ಅತ್ಯಾಚಾರ ಎಸಗಿದ ಆರೋಪದ ಹಿನ್ನೆಲೆಯಲ್ಲಿ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ಎಫ್‌.ಟಿ.ಎಸ್‌.ಸಿ ನ್ಯಾಯಾಲಯವು ಆರೋಪಿಗೆ 20 ವರ್ಷ ಕಾರಾಗೃಹ ಶಿಕ್ಷೆ ಮತ್ತು 37 ಸಾವಿರ ರೂ. ದಂಡ ವಿಧಿಸಿದೆ. ಹೊನ್ನಾಳಿ ತಾಲ್ಲೂಕಿನ ಸೊರಟೂರು ಗ್ರಾಮದ ಮಹೇಶ್ವರಪ್ಪ (34), ಶಿಕ್ಷೆಗೆ ಗುರಿಯಾದ ವ್ಯಕ್ತಿ. 

10-11-2021ರಲ್ಲಿ ಈ ಪ್ರಕರಣ ನಡೆದಿದ್ದು, ಸರ್ಕಾರಿ ಶಾಲೆಯಲ್ಲಿ 4ನೇ ತರಗತಿ ಓದುತ್ತಿದ್ದ ಬಾಲಕಿಗೆ, ಆರೋಪಿ ಮಹೇಶ್ವರಪ್ಪ ಚಾಕು ತೋರಿಸಿ ಅತ್ಯಾಚಾರ ಎಸಗಿದ ಪ್ರಕರಣ ಕುರಿತು ಸಂತ್ರಸ್ತೆಯ ತಂದೆ ಹೊನ್ನಾಳಿ ಪೊಲೀಸ್‌ ಠಾಣೆಗೆ ದೂರು ನೀಡಿದ್ದರು.

ತನಿಖಾಧಿಕಾರಿ ಟಿ.ವಿ. ದೇವರಾಜ್‌ ದೋಷಾರೋಪಣಾ ಪಟ್ಟಿ ಸಲ್ಲಿಸಿದ್ದರು. ನ್ಯಾಯಾಧೀಶ ಎನ್‌. ಶ್ರೀಪಾದ್‌ ಆರೋಪಿಗೆ ಶಿಕ್ಷೆ ವಿಧಿಸಿ ಆದೇಶಿಸಿದ್ದಾರೆ. ಸರ್ಕಾರಿ ವಕೀಲರಾದ ಸುನಂದಾ ಮಡಿವಾಳರ್‌ ಪಿರಾದಿ ಪರ ನ್ಯಾಯ ಮಂಡಿಸಿದರು.

error: Content is protected !!